ಜ.26ರಂದು ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ

0

ಬೆಳಗಾವಿ :  ಕೃಷಿ ಕಾಯ್ದೆ ವಿರೋಧಿಸಿ ಜ.26ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಟ್ಯಾಕ್ಟರ್  ರ‍್ಯಾಲಿ ಪಾಲ್ಗೊಳ್ಳಲು ಹೊರಟಿದ್ದ ಬೆಳಗಾವಿ ರೈತ ಮುಖಂಡರನ್ನು ಪೊಲೀಸರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ತಡೆದು, ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ವಿವಿಧೆಡೆಯಿಂದ ಟ್ಯಾಕ್ಟರ್ ಮೂಲಕ ಆಗಮಿಸಿದ ರೈತರು ಶನಿವಾರ ಇಲ್ಲಿನ ರಾಣಿ ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿದರು. ಬಳಿಕ ನಗರದ ಕೆಲ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆ ನಡೆಸುವ ಮೂಲಕ ಬೆಂಗಳೂರಿಗೆ ತೆರಳಲು ಮುಂದಾಗಿದ್ದರು.

ಈ ವೇಳೆ ತಡೆದು ಪೊಲೀಸರು  ಟ್ಯಾಕ್ಟರ್ ಗಳ ವಶಕ್ಕೆ ಪಡೆದುಕೊಂಡರು.

ಈ ಹಿನ್ನೆಲೆಯಲ್ಲಿ ರೈತ ಮುಖಂಡ ಸಿದ್ದನಗೌಡ ಮೊದಗಿ ನೇತೃತ್ವದಲ್ಲಿ ರೈತರು ಚನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿ, ಭಜನೆ, ವಾದ್ಯ-ಮೇಳ, ಹಲಗೆ ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.