ಪ್ರೀ ವೆಡ್ಡಿಂಗ್ ಫೋಟೋಶೂಟ್ ಕ್ರೇಜ್ ತಂದ ಆಪತ್ತು: ಮೂವರ ಸಾವು !

0

ಹುಬ್ಬಳ್ಳಿ :  ಪ್ರೀ-ವೆಡ್ಡಿಂಗ್ ಪೋಟೋ ಶೂಟ್ ಗಾಗಿ ತೆರಳಿದ ಐವರಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಇಲ್ಲಿನ ಅಣ್ಣಿಗೇರಿ ಬಸಾಪುರ ಕಾಲುವೆ ಗೇಟ್ ಬಳಿ ನಡೆದಿದೆ.

ನಿನ್ನೆ  ಪ್ರೀ-ವೆಡ್ಡಿಂಗ್ ಪೋಟೋ ಶೂಟ್ ಗೆ ಹುಬ್ಬಳ್ಳಿಯ ಅಣ್ಣಿಗೇರಿಯ ಬಸಾಪುರ ಕಾಲುವೆ ಗೇಟ್ ಬಳಿ ಐವರು ತೆರಳಿದ್ದಾರೆ.ಕೊನೆಗೆ ಎಲ್ಲರೂ ಸೇರಿ ಒಂದು ಸೆಲ್ಪಿ ತೆಗೆದುಕೊಳ್ಳಲು ನಿಂತಿದ್ದಾರೆ.

ಹೀಗೆ ನಿಂತಾಗಲೇ ಅದೆಲ್ಲಿದ್ದವೋ ಜೇನು ನೊಣ ದಿಢೀರ್ ದಾಳಿ ನಡೆಸಿವೆ. ಇದರಿಂದ ಜೇನು ನೋಣಗಳ ದಾಳಿಯಿಂದ ರಕ್ಷಿಸಿಕೊಳ್ಳಲು  ಹರಿಯುತ್ತಿದ್ದಂತ ಅಣ್ಣಿಗೇರಿ ಬಸಾಪುರ ಕಾಲುವೆಗೆ ಹಾರಿದ್ದಾರೆ.

ಸಮೀಪದಲ್ಲಿದ್ದ ಕುರಿ ಕಾಯುತ್ತಿದ್ದವರು ಹಾರಿರುವುದನ್ನು ಕಂಡು ನೀರಿಗೆ ಹಾರಿ ಯುವಕ, ಯುವತಿಯನ್ನು ರಕ್ಷಿಸಿದ್ದಾರೆ. ಆದ್ರೆ ಮತ್ತೆ ಮೂವರನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಮೂವರರಲ್ಲಿ ಇಬ್ಬರ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದ್ದು, ಮತ್ತೋರ್ವನ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳಿಂದ ಹುಡುಕಾಟ ನಡೆಸಿದ್ದಾರೆ.