ಸಮಾಜ ೨ ಎ ಮೀಸಲಾತಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

0

ಮೂಡಲಗಿ : ಲಿಂಗಾಯತ ಪಂಚಮಸಾಲಿ  ೨ಎ ಮೀಸಲಾತಿ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ, ಪಂಚಮಸಾಲಿ ಅಭಿವೃದ್ಧಿ ಸಮಿತಿ ವತಿಯಿಂದ ಅರಭಾವಿ ಶಾಸಕ  ಬಾಲಚಂದ್ರ ಜಾರಕಿಹೊಳಿಗೆ  ಮನವಿ ಸಲ್ಲಿಸಲಾಯಿತು.

ಶಾಸಕ ಬಾಲಚಂದ್ರ ಜಾರಕಿಹೋಳಿ ಮನವಿಯನ್ನು ಸ್ವಿಕರಿಸಿ ಮಾತನಾಡಿ,  ಪಂಚಮಸಾಲಿ ಸಮುದಾಯ ಬಂದುಗಳು ನಡೆಸುತ್ತಿರುವ ೨ಎ ಮೀಸಲಾತಿಯ ಪಡೆಯುವಲು ನಡೆಸುತ್ತಿರುವ  ಪಾದಯಾತ್ರೆಗೆ ಸಂರ್ಪೂಣವಾಗಿ ಸಹಕಾರ ಇದೆ ಮತ್ತು ಅದು  ಯಶಶ್ವಿಯಾಗುವುದು ಎಂದು ಹೇಳಿದರು.

ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ  ಮಾತನಾಡಿ,  ಪಂಚಮಸಾಲಿ ಬಂದುಗಳು ಶಿಕ್ಷಣ ಮತ್ತು ಉದ್ಯೂಗದಲ್ಲಿ ಕೇಳುತ್ತಿರುವ ೨ಎ ಮೀಸಲಾತಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ  ಮೂಡಲಗಿ ಪಂಚಮಸಾಲಿ  ತಾಲ್ಲೂಕು  ಅಧ್ಯಕ್ಷ ಬಸವರಾಜ ಪಾಟೀಲ, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಮಹಾಲಿಂಗಪೂರ, ಸಮಾಜದ ಮುಖಂಡರಾದ ಬಸವಪ್ರಭು ನಿಡಗುಂದಿ, ಶಿವಲಿಂಗಪ್ಪಾ ಗೋಕಾಕ, ಪರುಶುರಾಮ ಗೋಕಾಕ, ಸದಾಶಿವ ನಿಡಗುಂದಿ, ದೀಪಕ ಜುಂಜರವಾಡ, ಮಲ್ಲು ಗೋಡಿಗೌಡರ, ಈಶ್ವರ  ಢವಳೇಶ್ವರ , ನಿಂಗಪ್ಪಾ ಪಿರೋಜಿ,

ಆನಂದ  ಮುಗಳಖೋಡ, ರಾಘವೇಂದ್ರ  ಕುಡಚಿ, ಪ್ರಶಾಂತ ನಿಡಗುಂದಿ,  ಗುರುಲಿಂಗಪ್ಪ ಗೋಕಾಕ, ಮಹಾದೇವ ಗೋಕಾಕ, ಶಿವಬಸು ಶೇಗುಣಶಿ ಇನ್ನಿತರು ಉಪಸ್ಥಿತರಿದ್ದರು.