ಕಾಂಗ್ರೆಸ್ ಆರ್ ಡಿಪಿಆರ್ ಸಂಘಟನೆಗೆ ಚುರುಕು, 6 ಜಿಲ್ಲೆಗಳಲ್ಲಿ ಅವಲೋಕನ ಸಭೆ

0

ಬೆಳಗಾವಿ:  ಭೂತ ಮಟ್ಟದಲ್ಲಿಯೂ  ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ   ಕಾಂಗ್ರೆಸ್   ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗೂ ಚುರುಕು ನೀಡುತ್ತಿದೆ. ಬೆಳಗಾವಿ ವಿಭಾಗದ ಆರು ಜಿಲ್ಲೆಗಳಲ್ಲಿ  ಅವಲೋಕನಸಭೆ ನಡೆಸಲು ಇದೀಗ  ಮುಂದಾಗಿದೆ.

ರಾಜೀವ್ ಗಾಂಧಿ  ಪಂಚಾಯತ್ ರಾಜ್ ಸಂಘಟನೆ ಕರ್ನಾಟಕ ಉಸ್ತುವಾರಿ ಬಿನಿತಾ ಓರಾ  ಬೆಳಗಾವಿಗೆ ಇಂದು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

ಬಳಿಕ   ಇಲ್ಲಿನ  ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,  ಜ. 26 ವರೆಗೆ ಬೆಳಗಾವಿ,  ಗದಗ,   ವಿಜಯಪುರ,  ಬಾಗಲಕೋಟೆ,  ಚಿಕ್ಕೋಡಿ ವಿಭಾಗ ಸೇರಿ ಒಟ್ಟು 6 ಜಿಲ್ಲೆಗಳಲ್ಲಿ  ಸಂಘಟನೆ   ಸಭೆ ನಡೆಸಲಿದ್ದೇವೆ.

ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು. ಮುಂದೆ ಬೂತ ಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ರುಪುರೇಶ ಸಿದ್ದಪಡಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ   ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ವಿನಯ ನಾವಲಗಟ್ಟಿ, ಆರ್ ಡಿಪಿಆರ್ ಜಿಲ್ಲಾಧ್ಯಕ್ಷ ಉಮೇಶ ಬಾಳಿ, ಕಾಂಗ್ರೆಸ್ ಮುಖಂಡರಾದ  ಜೈನ್ ಪ್ರಕಾಶ ಸಿಂಧೆ,  ತೇಜಶ್ವಿನಿ ನಾಯಕ, ಜಗದೀಶ ಸಾವಂತ, ರಾಮಚಂದ್ರ ಪಾಟೀಲ್  ಜಯಶ್ರೀ ಮಾಳಗಿ ಮುಂತಾದವರು ಇದ್ದರು.