ಅಂಗಡಿ ಲೂಟಿ ಮಾಡುವ ಯತ್ನ ವಿಫಲ….

0

ಬೆಳಗಾವಿ-ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದ ಅಂಗಡಿಯೊಂದರ ಮಾಲೀಕನ ಮೇಲೆ ಗುಂಡು ಹಾರಿಸಿ,ಹಣ ಲೂಟಿ ಮಾಡುವ ಪ್ರಯತ್ನ ನಡೆಸಿರುವ ಗಂಭೀರ ಪ್ರಕರಣ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶುಕ್ರವಾರ ರಾತ್ರಿ ಬೆಳಗಾವಿಯ ಮಠಗಲ್ಲಿಯ ಹೋಲ್ ಸೇಲ್ ಸ್ಟೇಶನರಿ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಶನಿವಾರ ರಾತ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಮೇಲೆ ಆಗಮಿಸಿದ ಇಬ್ಬರು ದರೋಡೆಕೋರರು,ಅಂಗಡಿಗೆ ಹೋಗಿ ಒಬ್ಬ ಬಿಸ್ಕೀಟ್ ಖರೀಧಿ ಮಾಡುವ ಹಾಗೆ ನಾಟಕ ಮಾಡಿದ್ದು,ಇನ್ನೊಬ್ಬ ಅಂಗಡಿ ಮಾಲಿಕನ ಮೇಲೆ ಗುಂಡು ಹಾರಿಸಿ,ಕ್ಯಾಶ್ ಕೌಂಟರ್ ಗೆ ಕೈ ಹಾಕಲು ಯತ್ನಿಸಿದಾಗ ಅಂಗಡಿ ಮಾಲೀಕ ಆತನ ಮೇಲೆ ಸಾಬೂನು ಬಾಕ್ಸ್ ಎಸೆದು ಆತನನ್ನು

ತಡೆಯುವ ಪ್ರಯತ್ನ ಮಾಡಿದ್ದಾನೆ ದರೋಡೆಖೋರ ಹಾರಿಸಿದ ಗುಂಡು ಯಾರಿಗೂ ತಾಕಿಲ್ಲ,ಆದ್ರೆ ದರೋಡೆಕೋರ ಅಂಗಡಿ ಮಾಲೀಕನ ತಲೆಗೆ ಬಂದೂಕಿನ ಹಿಂಬದಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

 

ಅಂಗಡಿ ಲೂಟಿ ಮಾಡಲು ದರೋಡೆಕೋರರು ಫೈರೀಂಗ್ ಮಾಡಿದ್ರೂ ಸಹ ಅಂಗಡಿ ಮಾಲೀಕ ಅದನ್ನು ತಡೆಯುವ ಧೈರ್ಯ ತೋರಿಸಿ ದರೋಡೆಕೋರರನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಘಟನೆ ಅಂಗಡಿ ಓಪನ್ ಇರುವಾಗಲೇ ನಡೆದಿದ್ದು ಅತ್ಯಂತ ಆತಂಕಕಾರಿ ಯಾಗಿದ್ದು,ಈ ಘಟನೆ ನಡೆದಿದ್ದು ಬೆಳಗಾವಿಯ

ರವಿವಾರ ಪೇಠೆ ಪ್ರದೇಶದಲ್ಲಿರು ಮಠ ಗಲ್ಲಿಯಲ್ಲಿ.ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.