ಒಗ್ಗಟ್ಟಿನಿಂದ ಛಲವಾದಿ ಸಮಾಜ ಅಭಿವೃದ್ಧಿ: ನೆಹರು

0

ಬೆಳಗಾವಿ: ಛಲವಾದಿ ಸಮಾಜಕ್ಕೆ ಸರಕಾರಿ ಯೋಜನೆಗಳಿವೆ, ಇವುಗಳನ್ನು ಸಕ್ರೀಯವಾಗಿ ಸದುಪಯೋಗ ಮಾಡಿಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಏಳಿಗೆ ಕಾಣಬೇಕಿದೆ. ಛಲವಾದಿ ಅಭಿವೃದ್ಧಿಗಾಗಿ ಸಮಾಜ ಭಾಂದವರು ಒಗ್ಗಟ್ಟಾದರೆ ಮಾತ್ರ ಇವೆಲ್ಲವೂ ಸಾಧ್ಯ ಎಂದು ಹಾವೇರಿ ಶಾಸಕ ನೆಹರು ಓಲೆಕರ ಸೂಚನೆ ನೀಡಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಛಲವಾದಿ ಸಮಾಜದಿಂದ ಆಯೋಜಿಸಿದ ಛಲವಾದಿ ಸಮಾಜದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ, ಡಾ. ಅಂಬೇಡ್ಕರ, ಬುದ್ಧರ ಭಾವಚಿತ್ರಗಳಿಗೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿ,
ಆರ್ಥಿಕವಾಗಿ ಪ್ರಬಲರಾಗಬೇಕೆಂದರೆ ಒಗ್ಗಟ್ಟು ಪ್ರದರ್ಶನ ಅಗತ್ಯವಿದೆ ಅದು ನಾವು ರೂಪಿಸಿಕೊಂಡಾಗ ಮಾತ್ರ ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳು ಸಾದ್ಯ ಎಂದರು.
ಶಾಸಕ ನೆಹರು ಓಲೆಕರ ಇವರಿಗೆ ಜಿಲ್ಲಾ ಅಧ್ಯಕ್ಷರ ದುರ್ಗೇಶ ಮೇತ್ರಿ ಸ್ವಾಗತಿಸಿ, ಸನ್ಮಾನಿಸಿದರು. ಈ ವೇಳೆ ಹಿಂಡಲಗಾ ಕಾರಾಗೃಹದ ಮಹಾ ಅಧೀಕ್ಷಕರಾದ ಕೃಷ್ಣಮೂರ್ತಿ, ದಾವಣಗೆರೆಯ ನಿವೃತ್ತ ಪೋಲೀಸ್ ಅಧೀಕ್ಷಕರು ರುದ್ರಮನಿ ಮತ್ತು ಡಾ. ಶೇಖರಪ್ಪ ಮತ್ತು ಸಿ.ಪಿ.ಆಯ್ ಕಾಂಬಳೆ ಹಾಗೂ ಛಲವಾದಿ ಸಮಾಜದಿಂದ ಆಯ್ಕೆಯಾದ ಗ್ರಾ.ಪಂ ಸದಸ್ಯರನ್ನು ಸನ್ಮಾನಿಸಲಾಯಿತು.

ಸಂಘಟನೆಯ ಪದಾಧಿಕಾರಿಗಳಾದ ಹಣಮಂತ ಮಧಾಳೆ, ಧನಪಾಲ ಅಗಸಿಮನಿ, ಸಿದ್ದಪ್ಪ ತಂಬಾಕದವರ, ಕೃಷ್ಣಾ ಕಾಂಬಳೆ, ಸಂಜಯ ಕೋಲಕಾರ, ದಯಾನಂದ ಕೆರೂರೆ, ಕುಮಾರ ದರಬಾರೆ, ಲಕ್ಷ್ಮಣ ಕಾಂಬಳೆ ಹಾಗೂ ಕಾರ್ಯಕರ್ತರು ಇತರರು ಇದ್ದರು.
ದೀಪಕ ಮೇತ್ರಿ ನಿರೂಪಿಸಿ, ವಂದಿಸಿದರು.