ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕೋವಿಡ್ 19ರ ಲಸಿಕಾ ಕಾರ್ಯಕ್ರಮ

0

ಬೆಳಗಾವಿ, ಜ. 25 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸೋಮವಾರ (ಜ.25) ಕೋವಿಡ್ 19ರ ಲಸಿಕಾ ಕಾರ್ಯಕ್ರಮ ಜರುಗಿತು.
ಲಸಿಕಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಡಾ ಶೈಲಜಾ ತಮ್ಮಣ್ಣವರ ಉಪನಿರ್ದೇಶಕರು ಉದ್ಘಾಟಿಸಿದರು. ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎಸ್. ವಿ ಮುನ್ಯಾಳ ಸೇರಿದಂತೆ ಎಲ್ಲ ಅಧಿಕಾರಿಗಳು ಕಚೇರಿ ಸಿಬ್ಬಂದಿ ಸೇರಿ 75 ಫಲಾನುಭವಿಗಳು ಲಸಿಕೆ ಪಡೆದರು.
ಡಾ ಎಸ್. ವಿ ಮುನ್ಯಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಅಧ್ಯಕ್ಷತೆ ವಹಿಸಿದ್ದರು. ಡಾ ಐ ಪಿ ಗಡದ್ ಸಂತಾನೋತ್ಪತ್ತಿ, ಮಕ್ಕಳ ಅಧಿಕಾರಿ.ಡಾ ಬಿ. ಎನ್. ತುಕ್ಕಾರ್ ಡಿ ಎಸ್ ಓ.ಡಾ ಸರೋಜ ತಿಗಡಿ ಪ್ರಾಚಾರ್ಯರು ಡಾ ಎಂ. ವ್ಹಿ ಕಿವಡಸಣ್ಣವರು ಕುಟುಂಬ ಕಲ್ಯಾಣ ಅಧಿಕಾರಿ ಹಾಜರಿದ್ದರು.