ಬೆಳಗಾವಿಯಲ್ಲಿ ಜಿಲಿಟೀನ್ ಸ್ಪೋಟಕ ವಶ..

0

ಬೆಳಗಾವಿ-ಶಿವಮೊಗ್ಗ ಜಿಲ್ಲೆಯ ಹುಣಸೋಡಿ ಗ್ರಾಮದಲ್ಲಿ ಜಿಲಿಟೀನ್ ಸ್ಪೋಟಕ ಹಲವಾರು ಜನರನ್ನು ಬಲಿ ಪಡೆದ ಬೆನ್ನಲ್ಲಿಯೇ ಬೆಳಗಾವಿ ಆಂತರಿಕ ಭದ್ರತೆ ವಿಭಾಗದ ಪೋಲೀಸರು ಜಿಲಿಟೀನ್ ಸ್ಪೋಟಕ ವಶ ಪಡಿಸಿಕೊಂಡಿದ್ದಾರೆ.

ಗೋಕಾಕ ತಾಲ್ಲೂಕಿನ ಕುಲಗೋಡ ಠಾಣಾ ವ್ಯಾಪ್ತಿಯಲ್ಲಿ,ಮನ್ನಿಕೇರಿ ಗ್ರಾಮದ ಹದ್ದಿಯಲ್ಲಿ ಆಂತರಿ ಭದ್ರತಾ ವಿಭಾಗದ ಪೋಲೀಸರು ಪೆಟ್ರೋಲೀಂಗ್ ಮಾಡುವಾಗ ಟ್ರ್ಯಾಕ್ಟರ್ ನಲ್ಲಿ ಜಿಲಿಟೀನ್ ಸ್ಪೋಟಕ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ

ಜಿಲೀಟೀನ್ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿ 49 ಜಿಲಿಟೀನ್ ಕಡ್ಡಿಗಳು,23 ಈಡಿ ಕೇಬಲ್ ಗಳು,ಮತ್ತು ಒಂದು ಬ್ಲಾಸ್ಟರ್ ಚಾರ್ಜರ್ ಬ್ಯಾಟರಿ,ವಶಪಡಿಸಿಕೊಂಡಿದ್ದಾರೆ.