ಬಾಲಕ ನಾಪತ್ತೆ

0

ಬೆಳಗಾವಿ, ಜ. 27 : ಕ್ರಿಶ್ಚಿಯನ್ ಕಾಲನಿ ಶಾಹು ನಗರ ಬೆಳಗಾವಿಯ ನಿವಾಸಿಯಾದ ಓಂಕಾರ ರಾಜನ್ ರಾಯಚೂರಕರ ಜ.19 ರಂದು ಬೆಳಿಗ್ಗೆ 4:30 ಗಂಟೆಗೆ ಮನೆಯಲ್ಲಿ ಹೇಳದೆ ಕೇಳದೇ ಮನೆಯಿಂದ ಹೋದವನು ಇಲ್ಲಿಯವರೆಗೆ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆÉ ಎಂದು ಎ.ಪಿ.ಎಂ.ಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓಂಕಾರ ರಾಜನ್ ರಾಯಚೂರಕರ (17 ವರ್ಷ) 5 ಪೂಟ 4 ಇಂಚು ಎತ್ತರ, ನೆಟ್ಟನೆ, ಮೈಬಣ್ಣ ಕೆಂಪು ಗೋದಿ ಬಣ್ಣ, ಕಪ್ಪು ಬಣ್ಣದ ಟೀ-ಶರ್ಟ ಮತ್ತು ಕಪ್ಪು ಬಣ್ಣದ ಶರ್ಟ ಹಾಗೂ ಕಾಲೇಜ್ ಬ್ಯಾಗ ಇದೆ. ಹತ್ತನೇ ತರಗತಿ ಶಿಕ್ಷಣ ಹಾಗೂ ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾನೆ.