2020-21 ನೇ ಸಾಲಿನ 2020 ರ ಡಿಸೆಂಬರ ಅತ್ಯಂದವರೆಗಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಪ್ರಗತಿ ಪರಿಶೀಲನಾ ಸಭೆಯು ಜರುಗಿತು:

0

ಬೆಳಗಾವಿ 27: ದಿನಾಂಕ 27.01.2021 ರಂದು ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ 2020-21 ನೇ ಸಾಲಿನ 2020 ರ ಡಿಸೆಂಬರ ಅತ್ಯಂದವರೆಗಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಪ್ರಗತಿ ಪರಿಶೀಲನ ಸಭೆಯು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ರಮೇಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಅಭಿವೃಧ್ದಿ ಕಾಮಗಾರಿಗಳ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳಾದ ಶ್ರೀ. ಎಮ್. ಜಿ. ಹಿರೇಮಠ ಅವರು ವಿವರಿಸಿದರು.
ಈ ವೇಳೆ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃಧ್ದಿ ಕಾರ್ಯಗಳ ಕುರಿತು ಗಮನ ಸೆಳೆದ ಶಾಸಕ ಅನಿಲ ಬೆನಕೆರವರು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಒಂದು ಲಕ್ಷ ಹಣ್ಣಿನ ಗಿಡಗಳನ್ನು ನೇಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಹಣ್ಣಿನ ಗಿಡಗಳನ್ನು ನೆಡುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುತ್ತದೆ ಹಾಗೂ ಮನುಷ್ಯನಿಗೆ ಶುದ್ದವಾದ ಗಾಳಿಯು ಲಭಿಸುವುದಿರಂದ ಕೂಡಲೇ ಕ್ರಮ ಕೈಗೊಳ್ಳುವುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಶ್ರಯ ಯೋಜನೆಯಲ್ಲಿನಿರ್ಮಿಸಲಾದ ಮನೆಗಳ ಪ್ರದೇಶಗಳನ್ನು ಕೂಡಲೇ ಸ್ಲಮ್ ಎಂದು ಘೋಷಿಸಿ ಮನೆಗಳ ಪುನರ್‍ನಿರ್ಮಾಣಕ್ಕೆ ಜಿಲ್ಲಾಡಳಿತ ಒತ್ತು ನೀಡಬೇಕೆಂದ ಅವರು ಕೋವಿಡ ಸಂಕಷ್ಟದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಊಟ, ರೋಗಿಗಳಿಗೆ ಔಷಧ, ಆಸ್ಪತ್ರೆಗಳಿಗೆ ಮೆಡಿಕಲ್ ಉಪಕರಣಗಳನ್ನು ಪೂರೈಸಿದ ವರ್ತಕರಿಗೆ ಇನ್ನೂ ಬಿಲ್ ಪಾವತಿಯಾಗಿಲ್ಲವಾದ್ದರಿಂದ ಕೂಡಲೇ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಮ್. ಜಿ. ಹಿರೇಮಠ ರವರು ಮಾತನಾಡಿ ಹೊಟೆಲ್ ಹಾಗೂ ಮೆಡಿಕಲ್ ಇಕ್ವಿಪ್‍ಮೆಂಟ್ ಪೂರೈಸಿದವರಿಗೆ ಬಿಲ್ ಪಾವತಿಸಲು ಜಿಲ್ಲಾಡಳಿತದಿಂ 1 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ ಸಂಬಂಧಿಸಿದವರನ್ನು ವಿಚಾರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಕೋವಿಡ್ ಸಂದರ್ಭದ ಸಮಸ್ಯೆಗಳ ಬಗ್ಗೆ ಶಾಸಕ ಮಹೇಶ ಕಮಟಳ್ಳಿ ಹಾಗೂ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿರವರು ಪ್ರಸ್ತಾಪಿತ ಅದಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆಗಳ ಕುರಿತು ಸಭೆಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಮಹೇಶ ಕಮಟಳ್ಳಿ, ಅನಿಲ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ ಸಿ.ಇ.ಓ. ಹೆಚ್. ದರ್ಶನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.