ಆರ್. ಬಿ. ಬನಶಂಕರಿ ಅವರಿಗೆ ನೇತಾಜಿ ಸುಭಾಷಚಂದ್ರ ಭೋಸ್ ಸೇವಾ ಪ್ರಶಸ್ತಿ-೨೦೨೧

0

ಬೆಳಗಾವಿ :  ಆರ್. ಬಿ. ಬನಶಂಕರಿ ಅವರಿಗೆ ನೇತಾಜಿ ಸುಭಾಷಚಂದ್ರ ಭೋಸ್ ಸೇವಾ ಪ್ರಶಸ್ತಿ-೨೦೨೧

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಿವುಡ ಮಕ್ಕಳ ಸರಕಾರಿ ಶಾಲೆ, ವಿದ್ಯಾಗಿರಿ ಬೆಳಗಾವಿಯ ಪತ್ರಾಂಕಿತ ಅಧೀಕ್ಷಕರು/ಸಹಾಯಕ ನಿರ್ದೇಶಕರಾದ ಆರ್. ಬಿ. ಬನಶಂಕರಿ ಅವರಿಗೆ ವಿಕಲಚೇತನರ ಕ್ಷೇತ್ರದಲ್ಲಿ ಘಣನೀಯ ಸೇವೆ ಸಲ್ಲಿಸಿದ ಪ್ರಯುಕ್ತ ೨೦೨೧ ನೇ ಸಾಲಿನ ನೇತಾಜಿ ಸುಭಾಷಚಂದ್ರ ಭೋಸ್ ಸೇವಾ ಪ್ರಶಸ್ತಿಯನ್ನು ಬೆಳಗಾವಿಯ ರಾಮತೀರ್ಥ ನಗರದ ನೇತಾಜಿ ಸುಭಾಷಚಂದ್ರ ಭೋಸ್ ಕೋ ಆಫ್ ಕ್ರೆಡಿಟ್ ಸೊಸೈಟಿ ಅವರು ಪ್ರತಿ ವರ್ಷ ನೀಡುತ್ತಿರುವ ಪ್ರಶಸ್ತಿಯನ್ನು ಆನಂದ ಮಾಮನಿ, ಮಾನ್ಯ ಉಪ ಸಭಾಪತಿಗಳು, ಕರ್ನಾಟಕ ವಿಧಾನ ಸಭೆ, ಬೆಂಗಳೂರು, ಇವರು ನೀಡಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಸೊಸೈಟಿ ಚೇರಮನರಾದ ಮಾರುತಿ ಬಿ. ಝಿರಲಿ, ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ, ಬೆಳಗಾವಿಯ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಸೊಸೈಟಿ ನಿರ್ದೇಶಕ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಸದಸ್ಯರು ಉಪಸ್ಥಿತಿದ್ದರು. ವಿಜ್ರಂಭಣೆಯಿಂದ ಜರುಗಿದ ಕಾರ್ಯಕ್ರಮಕ್ಕೆ ರಾಮತೀರ್ಥ ನಗರ ಹಲವಾರು ರಹವಾಸಿಗಳು ಸಾಕ್ಷಿಯಾದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಿವುಡ ಮಕ್ಕಳ ಸರಕಾರಿ ಶಾಲೆ, ವಿದ್ಯಾಗಿರಿ ಬೆಳಗಾವಿ ಇಲ್ಲಿ ೭೨ ನೇ ಗಣರಾಜೋತ್ಸವನ್ನು ಆಚರಿಸಲಾಯಿತು.
ಶಾಲೆಯ ಪತ್ರಾಂಕಿತ ಅಧೀಕ್ಷಕರು/ಸಹಾಯಕ ನಿರ್ದೇಶಕರಾದ ಆರ್. ಬಿ. ಬನಶಂಕರಿಯವರು ಮಹಾತ್ಮ ಗಾಂಧೀಜಿ ಹಾಗೂ ಬಿ. ಆರ್. ಅಂಬೇಡ್ಕರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಧ್ವಜ ವಂದನೆಯನ್ನು ನೆರವೇರಿಸಿದು. ಕಿವುಡು ಮಕ್ಕಳ ಸರಕಾರಿ ಶಾಲೆ ಸಿಬ್ಬಂದಿ ವರ್ಗದವರು ಹಾಗೂ ಹತ್ತನೇಯ ತರಗತಿಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.