ಕಲಾವಿದರೆ ಶ್ರೀ ಕೃಷ್ಣ ಪಾರಿಜಾತ ಬೆಳೆಸಿದವರು

0

ಅಥಣಿ, ಜ. 28- ಈ ಹಿಂದೆ ಹಾಡಿನ‌ ರೂಪದಲ್ಲಿದ್ದ ಶ್ರೀ ಕೃಷ್ಣ ಪಾರಿಜಾತವನ್ನು ಸತತವಾಗಿ 200 ವರ್ಷಗಳವರೆಗೆ ಬೆಳೆಸಿದ ಕೀರ್ತಿ ಅಭಿಜಾತ ಕಲಾವಿದರಿಗೆ ಸಲ್ಲುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾದೆಮಿ (ನವದೆಹಲಿ) ಸದಸ್ಯ ಬಾಳಾಸಾಹೇಬ ಲೋಕಾಪೂರ ಹೇಳಿದರು.

ಸ್ಥಳೀಯ ಆರ್, ಎಚ್ ಕುಲಕರ್ಣಿ ಸಭಾ ಭವನದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರೀ ಕೃಷ್ಣ ಪಾರಿಜಾತ ಪ್ರಾತ್ಯಕ್ಷಿಕೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕೃಷ್ಣ ಪಾರಿಜಾತ ಹೆಣ್ಣು ಗಂಡಾಗುವ, ಗಂಡು ಹೆಣ್ಣಾಗುವ ಸಮನ್ವಯತೆಯನ್ನು ಸಾಧಿಸುವ ಮಹತ್ವವಾದ ಪ್ರಸಂಗ ವಾಗಿದೆ, ಅಪರಾಳ ತಮ್ಮಣ್ಣನಿಂದ ಸಂಭಾಷಣೆಗಳ ನಿರ್ಮಾಣ ವಾಯಿತು. ಹಾಗಾಗಿ ಇದು ನಮ್ಮ ನಾಡಿನ ಅತ್ಯಂತ ಪ್ರೀತಿಯ ಕಲಾಮಾದ್ಯಮವಾಗಿ ಮುಂದುವರೆದಿದೆ ಎಂದರು.

ಸಂಸ್ಥೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇಶಪಾಂಡೆ ಮಾತನಾಡಿ, ಪಾರಿಜಾತ ಜನಪದ ಕಲೆ ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ. ಪಾರಿಜಾತ ನಮ್ಮ ಪರಂಪರೆ ಸಂಸ್ಕಾರದ ಪರಿಚಯ ಮಾಡುತ್ತದೆ ಹೀಗಾಗಿ ಪಾರಿಜಾತ ಬಹಳ ಪ್ರಸಿದ್ಧಿ ಹೊಂದಿದೆ. ಅದೇ ರೀತಿ ಸಂಗ್ಯಾ ಬಾಳ್ಯಾ ಅಷ್ಟೇ ಪ್ರಸಿದ್ಧಿ ಹೊಂದಿವೆ. ಮಹಾಭಾರತದ ಕೃಷ್ಣ ಶೋಷಿತ ಮಹಿಳೆ ಯರಿಗೆ ಆಶ್ರಯ ನೀಡಿದ ಕೃಷ್ಣ ಆದರ್ಶ ಪಾತ್ರವಾಗಿದ್ದಾನೆ. ರಾಮಾಯಣ ಮಹಾಭಾರತಗಳು ಸತ್ಯ ಘಟನೆಗಳಾಗಿವೆ. ಈ ನಾಟಕ ಪ್ರದರ್ಶನದ ಸದುಪಯೊಗ ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಲು ಕೊರಿದರು.

ಜೆಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಬಿ ಕುಲಕರ್ಣಿ ಮಾತನಾಡಿ, ಆಧುನಿಕ ಕಾಲದಲ್ಲಿ ಹಲವಾರು ಮಾಧ್ಯಮಗಳ ಮಧ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಪಾರಿಜಾತ ಇಂದಿಗೂ ತನ್ನ ಮಹತ್ವ ಉಳಿಸಿಕೊಂಡಿದೆ ಒಂದು ಉತ್ತಮ ಕಲೆ ಹಾಗಾಗಿ ಸೂರ್ಯ ಚಂದ್ರರಿರುವವರೆಗೆ ತನ್ನ ಅಜರಾಮರವಾಗಿರುತ್ತದೆ. ನಾವೆಲ್ಲರೂ ಇಂದು ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ನಂತರ ಶ್ರೀ ಬಸವೇಶ್ವರ ಸಾಂಸ್ಕ್ರತಿಕ ಕಲಾ ಸಂಘ, ಲೋಕಾಪೂರ ಕಲಾವಿದರಿಂದ ಕೊರವಂಜಿ ಪ್ರಸಂಗ ಪ್ರಾತ್ಯಕ್ಷಿಕೆ ಜರುಗಿತು.

ಪ್ರಾಚಾರ್ಯ ಆರ್ ಎಮ್ ದೇವರಡ್ಡಿ ಸ್ವಾಗತಿಸಿದರು, ನಿಲೇಶ ಝರೆ ಅತಿಥಿ ಪರಿಚಯಿಸಿದರು. ಅಪ್ಪಾಸಾಬ ಅಲಿಬಾದಿ, ಗಿರೀಶ ಕುಲಕರ್ಣಿ, ಆರ್ ಎ ನಾಯಿಕ, ಗೌರೀಶ ದಿಕ್ಷೀತ, ಬಾಳೇಶ ಬಮನಾಳೆ, ಭಾರತಿ ಅಗಸರ, ವಿ ಪಿ ಜಾಲಿಹಾಳ, ಸಂತೋಷ ಬಡಕಂಬಿ, ಭಾಗ್ಯಶ್ರೀ ಗುಂಡಾ, ಪ್ರಿಯಂವದಾ ಅಣೆಪ್ಪನವರ, ರಾಮಣ್ಣಾ ದೊಡ್ಡನಿಂಗಪ್ಪಗೊಳ, ಅರ್ಚನಾ ಪೂಜಾರಿ ಇದ್ದರು.