ವಿವಾಹೇತರ ಸಂಬಂಧ: ಇಬ್ಬರು ಆತ್ಮಹತ್ಯೆಗೆ ಶರಣು!!

0

ರಾಯಚೂರು:  ವಿವಾಹೇತರ ಸಂಬಂಧ ಹೊಂದಿದ್ದ  ಇಬ್ಬರು  ಆತ್ಮಹತ್ಯೆಗೆ ಶರಣಾದ ಘಟನೆ ದೇವದುರ್ಗ ತಾಲೂಕಿನ  ಹೇಮನಾಳ ಗ್ರಾಮದಲ್ಲಿ ನಡೆದಿದೆ.

ರಂಗಣ್ಣ ನಾಯಕ(30) ರಂಗಮ್ಮ(18) ಆತ್ಮಹತ್ಯೆಗೆ ಶರಣಾದವರು.  ಮೃತ ರಂಗಣ್ಣ ಕಳೆದ  6 ವರ್ಷದ ಹಿಂದೆ  ಶಿವಮ್ಮ ಎಂಬಾಕೆಯೊಂದಿಗೆ ಮದುವೆಯಾಗಿದ್ದು, ಈ ದಂಪತಿಗೆ ಮಕ್ಕಳಾಗಿರಲಿಲ್ಲ.

ಈ ಹಿನ್ನೆಲೆ ರಂಗಣ್ಣ ಚಪ್ಪರಗುಂಡಿ ಗ್ರಾಮದ ರಂಗಮ್ಮ ಎಂಬಾಕೆ  ಜತೆ ಅಕ್ರಮ ಸಂಬಂಧ ಹೊಂದಿದ್ದ. ಪತ್ನಿ ಜಾತ್ರೆ ನಿಮಿತ್ತ ತವರು ಮನೆಗೆ ಹೋಗಿದ್ದರಿಂದ ಪ್ರೇಯಸಿ  ರಂಗಮ್ಮಳನ್ನು ಮನೆ ಕರೆಸಿಕೊಂಡಿದ್ದ ಎನ್ನಲಾಗಿದ್ದು,  ಳೆ ಇಬ್ಬರ ಮಧ್ಯೆ ಗಲಾಟೆ ನಡೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ರಂಗಮ್ಮಳಿಗೂ ಬೇರೊಬ್ಬನ ಜತೆ ವಿವಾಹವಾಗಿದ್ದು, ಆಕೆಯ ಪತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು  ಬಂದಿದೆ.

ಪತಿಯ ಸಾವಿನ ಬಳಿಕ  ಅಕ್ರಮ ಸಂಬಂಧದ ಬಗ್ಗೆ ಪತ್ನಿ ಶಿವಮ್ಮಳಿಗೆ ತಿಳಿದಿದ್ದು, ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ದೂರು ದಾಖಲಾಗಿದೆ.