ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ‘ಜನಪದ ಕಾರ್ಯಕ್ರಮ

0

ಬೆಳಗಾವಿ : ಜಿಲ್ಲಾ ಲೇಖಕಿಯರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಗುರುವಾರ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ “ಜಾನಪದ ಕಾರ್ಯಕ್ರಮ” ಜರುಗಿತು.

ಹಿರಿಯ ಲೇಖಕಿ ಆಶಾ ಕಡಪಟ್ಟಿ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿ, ನಮ್ಮ ಜಿಲ್ಲೆಯ ಮಹಿಳೆಯರು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವ ಕಲೆಗಳನ್ನು ಅನಾವರಣಗೊಳಿಸಲು ಹೊರ ಬಂದಿದ್ದಾರೆ ಇದಕ್ಕೆ ಕಾರಣ ಲೇಖಕಿಯರ ಸಂಘ ಎಂದರು.
ಲೇಖಕಿಯರ ಸಂಘ ಮಹಿಳೆಯರಲ್ಲಿ ಧೈರ್ಯ ತುಂಬಿ ಸಮಾಜಮುಖಿ ಕಾರ್ಯ ಕೈಗೊಳ್ಳಲು ಪ್ರೇರೇಪಿಸುತ್ತಿದೆ., ಹಿರಿಯರು ಕಿರಿಯರನ್ನು ಬೆಳೆಸೋಣ ಎಂದರು.

ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಪುಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಜನಪದ ‘ಎನ್ನುವುದು ನಮ್ಮ ಗ್ರಾಮೀಣ ಸೊಗಡು. ಅದು ಜೀವನದ ಆಗು ಹೋಗುಗಳ ಮತ್ತು ಆಚರಣೆಗಳನ್ನು ಬಾಯಿಂದ ಬಾಯಿಗೆ ಹಬ್ಬುತ್ತಾ ಅಲಿಖಿತವಾಗಿ ಬೆಳೆದು ನಂತರ ಲಿಖಿತ ರೂಪ ಪಡೆದು, ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುವತ್ತ ಸಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾ ಸೊನೊಳ್ಳಿ ಮಾತನಾಡಿ, ಜನಪದ ಸೊಗಡು ನಮ್ಮ ಮನಸ್ಸನ್ನು ಉಲ್ಲಾಸ ಗೊಳಿಸುವುದಲ್ಲದೇ ಗತಕಾಲವನ್ನು ನೆನಪಿಸಿ ಆನಂದಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಲೇಖಕಿಯರಾದ ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬದಾಮಿ, ಸುನಂದಾ ಎಮ್ಮಿ, ಶೈಲಜಾ ಬಿಂಗೆ, ಮೀನಾಕ್ಷಿ ಸೂಡಿ, ಆಶಾ ಯಮಕನಮರಡಿ, ಸಾಹಿತಿಗಳಾದ ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ ಸೇರಿದಂತೆ ಅನೇಕ ಸಾಹಿತ್ಯ ಭಿಮಾನಿಗಳು ಹಾಜರಿದ್ದರು.

ಹೇಮಾ ಬರ್ಬರಿ ಪ್ರಾರ್ಥಿಸಿದರು, ದೀಪಿಕಾ ಚಾಟೆ, ಹಮೀದಾ ಬೇಗಂ ಸ್ವಾಗತಿಸಿದರು, ಇಂದಿರಾ ಮೋಟೆಬೆನ್ನೂರು ವಂದಿಸಿದರು. ರಾಜನಂದಾ ಗಾರ್ಗಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.

ಈ ಮೊದಲು ಕಾರ್ಯಕ್ರಮದಲ್ಲಿ ಶಾಂತಲಾ, ಅಕ್ಕಮಹಾದೇವಿ ಮತ್ತು ಪ್ರೇಮ ಪಾನಶೆಟ್ಟಿ ತಂಡದಿಂದ ಸುಶ್ರಾವ್ಯವಾದ ಜನಪದ ಹಾಡುಗಳು ಮೂಡಿಬಂದವು. ವಿದ್ಯಾರ್ಥಿನಿಯರು ಮತ್ತು ಲೇಖಕಿಯರಿಂದ ಸಮೂಹ ನೃತ್ಯ ಜನಪದ ಸೊಗಡನ್ನು ಇಮ್ಮಡಿಗೊಳಿಸಿದರೆ ಶಾಂತಲಾ ಕಲಾ ತಂಡದವರ ಕಾಲಘಟ್ಟದ ಉಡುಗೆ-ತೊಡುಗೆ ಆಚಾರ-ವಿಚಾರಗಳನ್ನು ನೆನಪಿಸುವ ಬೀಸುವ ಹಾಡು, ಲಾಲಿಹಾಡು, ಹಬ್ಬದ ಹಾಡು, ಸುಗ್ಗಿ ಹಾಡುಗಳು ವಿಶೇಷ ಜನಪದ ವಸ್ತುಗಳ ಪ್ರದರ್ಶನದ ಮೂಲಕ ಮೂಡಿಬಂದು ನೆರೆದವರನ್ನು ರಂಜಿಸಿದವು .