ಎಸಿಬಿ ಬಲೆಗೆ ಹೆಸ್ಕಾಂ ಸೆಕ್ಷನ್ ಆಫೀಸರ್

0

ಬೆಳಗಾವಿ, ಜ. 29- ಹೊಲಕ್ಕೆ ಟಿಸಿ ಮಂಜೂರು ಮಾಡಲು 60 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಗೋಕಾಕ್ ಉಪ ವಿಭಾಗ ಹೆಸ್ಕಾಂ ಉಪವಿಭಾಗ ಸೆಕ್ಷನ್ ಆಫೀಸರ್ ಮತ್ತು ಇನ್ನೊಬ್ಬ ಸಿಬ್ಬಂದಿ ರೈಟ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ…

ಹೆಸ್ಕಾಂ ಉಪವಿಭಾಗ ಸೆಕ್ಷನ್ ಆಫೀಸರ್ ಪ್ರಕಾಶ್ ಪರಿಟ ಮತ್ತು ಇನ್ನೊಬ್ಬ ಸಿಬ್ಬಂದಿ ಮಲ್ಲಯ್ಯ ಹಿರೇಮಠ್ ಎಂಬಾತರೂ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಬಲೆಗೆ ಬಿದ್ದ ಆರೋಪಿಗಳು.

ಇಬ್ಬರನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.. ಅರಬಾವಿಯ ಆನಂದ್ ಧರ್ಮಟ್ಟಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಎಸಿಬಿ ಎಸ್ಪಿ ನ್ಯಾಮಗೌಡರ ಅವರ ಮಾರ್ಗದರ್ಶದಲ್ಲಿ ಡಿವೈಎಸ್ಪಿ ವೇಣುಗೋಪಾಲ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ
ಎ.ಎಸ್. ಗುದಿಗೊಪ್ಪ, ಸುನಿಲ್ ಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ ಎಂದು ಎಸಿಬಿ ಮೂಲಗಳು ನ್ಯೂಜ್ ೪ ಯು ಸುದ್ದಿವಾಹಿನಿಗೆ ತಿಳಿಸಿವೆ.

 

ಪಿರ್ಯಾದಿ ಶ್ರೀ ಆನಂದ ಉದ್ದಪ್ಪ ಧರ್ಮಟ್ಟಿ ಸಾ: ಅರಭಾಂವಿ ತಾ: ಮೂಡಲಗಿ ರವರ ತಂದೆಯವರ ಹೆಸರಿನಲ್ಲಿರುವ ಮೂಡಲಗಿ ತಾಲೂಕಿನ ಅರಭಾಂವಿ ಗ್ರಾಮದಲ್ಲಿ ರಿ.ಸ.ನಂ.43/1 ಜಮೀನು ಇದ್ದು, ಸದರಿ ಜಮೀನಲ್ಲಿರುವ ಟಿ.ಸಿಗೆ ವಿದ್ಯುತ್ ಲೋಡ ಹೆಚ್ಚಾಗಿ ಮೇಲಿಂದ ಮೇಲೆ ಹಾಳಾಗುತ್ತಿದ್ದು, ಸದರಿ ಟಿ.ಸಿಯನ್ನು ಬದಲಾಯಿಸಿ ಹೊಸದಾದ ಟಿ.ಸಿ ಕೂಡಿಸಿ ಕೊಡುವ ಸಲುವಾಗಿ ಪಿರ್ಯಾದಿದಾರರು ಇದರಲ್ಲಿ ಆಪಾದಿತರಾದ 01. ಶ್ರೀ ಪ್ರಕಾಶ ವಿರೂಪಾಕ್ಷ ಪರೀಟ್ ಸೆಕ್ಷೆನ ಆಫೀಸರ್ ಹು.ವಿ.ಸ.ಕ.ನಿ.ನಿ ಲೋಳುಸುರ ಸೆಕ್ಷೆನ್ 02. ಶ್ರೀ ಮಲ್ಲಯ್ಯಾ ಕುಮಾರಸ್ವಾಮಿ ಹಿರೇಮಠ ಮೇಲ್ವಿಚಾರಕ, ಲೋಳುಸುರ ಸೆಕ್ಷೆನ್ ಇವರಿಗೆ ಭೇಟಿಯಾಗಿ ಈ ಬಗ್ಗೆ ವಿಚಾರಿಸಿದಾಗ ಆಪಾದಿತ ಸರ್ಕಾರಿ ನೌಕರರಿಬ್ಬರು ಪಿರ್ಯಾದಿದಾರರಿಗೆ ರೂ.65.000/- ಗಳ ಲಂಚದ ಬೇಡಿಕೆ ಇಟ್ಟಿರುತ್ತಾರೆ.

ಶ್ರೀ.ಬಿ.ಎಸ್.ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಶ್ರೀ ಎಲ್. ವೇಣುಗೋಪಾಲ, ಪೊಲೀಸ್‍ಉಪಾಧೀಕ್ಷಕರು, ಪೊಲೀಸ್ ಠಾಣೆ, ಬೆಳಗಾವಿ ರವರು ದಾಖಲಿಸಿಕೊಂಡಿರುತ್ತಾರೆ. ಶ್ರೀ. ಹೆಚ್.ಸುನೀಲ್‍ಕುಮಾರ ಮತ್ತು ಶ್ರೀ.ಎ.ಎಸ್‍ಗೂದಿಗೊಪ್ಪ, ಪೊಲೀಸ್ ಇನ್ಸ್‍ಪೆಕ್ಟರ್, ಹಾಗೂ ಬೆಳಗಾವಿ ಎಸಿಬಿ ಪೊಲೀಸ್ ಠಾಣೆ ಸಿಬ್ಬಂದಿಯವರು ಕಾರ್ಯಚರಣೆಯಲ್ಲಿ ತೊಡಗಿದ್ದು, ದಿನಾಂಕ. 29.01.2021 ಲಂಚದ ಹಣ ರೂ. 65.000/- ಗಳನ್ನು ಆಪಾದಿತರಾದ 01. ಶ್ರೀ ಪ್ರಕಾಶ ವಿರೂಪಾಕ್ಷ ಪರೀಟ್ ಸೆಕ್ಷೆನ ಆಫೀಸರ್ ಹು.ವಿ.ಸ.ಕ.ನಿ.ನಿ ಲೋಳುಸುರ ಸಾ: ಕುರ್ನೆವಾಡಿ ತಾ: ಹುಕ್ಕೇರಿ 02. ಶ್ರೀ ಮಲ್ಲಯ್ಯಾ ಕುಮಾರಸ್ವಾಮಿ ಹಿರೇಮಠ ಮೇಲ್ವಿಚಾರಕ, ಹು.ವಿ.ಸ.ಕ.ನಿ.ನಿ ಲೋಳುಸುರ ಸೆಕ್ಷೆನ್ ಸಾ: ಮಹಾಲಿಂಗೇಶ್ವರ ನಗರ ಗೋಕಾಕ ಇವರು ರೂ.65.000/-ಲಂಚದ ಹಣವನ್ನು ಸ್ವೀಕರಿಸುತ್ತಿರುವ ವೇಳೆಯಲ್ಲಿ ಸಿಕ್ಕಿದ್ದು, ಸದರಿ ಆರೋಪಿತರನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿರುತ್ತದೆ ಹಾಗೂ ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.