ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಬಬಲೆಶ್ವರ ಗೌಡರೇ ನಿದರ್ಶನ

0

ಜೀವನದಲ್ಲಿ ಸಾಧನೆ ಬಹು ಮುಖ್ಯ. ಸಾಧನೆಯಿಲ್ಲದ ಜೀವನ ಜೀವನವೇ ಅಲ್ಲ, ಅದು ವ್ಯರ್ಥ.”ಈಜಬೇಕು ಈಜಿ ಗೆಲ್ಲಬೇಕು”. ನಾವು ಬದುಕುವ ಬದುಕು ಗೆಲುವಾಗಬೇಕೇ ಹೊರತು, ಸೋಲಾಗಬಾರದು. ಗೆಲುವೇ ಜೀವನದ ಸಾಧನೆಯ ಮೆಟ್ಟಿಲು. ಸಾಧನೆ ಮಾಡಬೇಕಾದರೆ ನಿರಂತರ ಚಟುವಟಿಕೆ, ಸತತ ಪ್ರಯತ್ನ, ತಾಳ್ಮೆ ಅವಶ್ಯಕ. ಯಾವುದಕ್ಕೂ ಎದೆಗುಂದಬಾರದು. ನುಗ್ಗಿ ನಡೆದಾಗಲೇ ಜಯವು ತಾನಾಗಿಯೇ ಒಲಿಯುತ್ತದೆ. ಇಂತಹ ಸಾಧನೆಗಳ ಬೆನ್ನೇರಿ, ಹತ್ತು ಹಲವು ಸಾಧನೆಗಳ ಶಿಖರದತ್ತ ದಾಪುಗಾಲಿಡುತ್ತಾ ನಡೆದವರು, ಸದಾ ಚಿಂತನಾಶೀಲರು, ಸೃಜನಶೀಲರು, ಕ್ರಿಯಾಶೀಲರು, ಹಸನ್ಮುಖಿಗಳು, ವಿಶೇಷ ಸಂಪನ್ಮೂಲರು ಅಣ್ಣಾಸಾಹೇಬ ವಿ ಪಾಟೀಲರು. ಇಂದು ಇವರ ಬಗ್ಗೆ ಹೇಳಲು ಹಲವು ಕಾರಣವಿದೆ.


ಎಷ್ಟೇ ಕಷ್ಟಬಂದರೂ ಎದೆಗುಂದಬಾರದು ಎನ್ನಲು ಇವರ ಜೀವನ ಸಾಧನೆ ಮಾರ್ಗದರ್ಶನ, ಒಂದು ಗಂಡಿನ ಸಾಧನೆ ಹಿಂದೆ ಒಂದು ಹೆಣ್ಣು ಇದ್ದೆ ಇರುತ್ತಾರೆ ಎನ್ನಲು ಇವರ ಪತ್ನಿ ನಿದರ್ಶನ, ಗಂಡ ಹೆಂಡತಿ ಆದರ್ಶತನಕ್ಕೆ ಇವರ ದಾಂಪತ್ಯ ಜೀವನ ಸಾಕ್ಷಿ. ಸಮಾಜ ಸೇವೆ, ಕಾಯಕವೇ ಕೈಲಾಸವೆಂಬ ಇವರ ತತ್ವ ಇಂದು ಇಲ್ಲಿ ಅಕ್ಷರಗಳಾಗಿ ಬರೆಯಲು ನಮಗೆ ಪ್ರೇರೇಪಣೆ ಆಯಿತು.
ಅಣ್ಣಾಸಾಹೇಬ ವಿ ಪಾಟೀಲರ ಬದುಕು ಪರಿಶ್ರಮದ ಜೇನೂಗುಡು. ಹೌದು ಸದಾಕಾಲ ಸಮಾಜಮುಖಿ ಕಾರ್ಯಗಳ ಸರಳ ಸಜ್ಜನೀಕೆಯ ವ್ಯಕ್ತಿತ್ವದ ಇವರ ಬದುಕು ಸಾವಿರಾರೂ ಜನರಿಗೆ ಮಾದರಿ. ಒಬ್ಬ ವ್ಯಕ್ತಿಯ ಜಿವನದಲ್ಲಿ ಆತ ನಂಬಿದ ಹಾಗೂ ನಂಬಿಕೋಡ ಕಸಬು ಅವರ ಜೀವನದಲ್ಲಿ ಯಾವತ್ತು ಅವರಿಗೆ ಮುಳುವಾಗಲಿಲ್ಲಾ ಎನ್ನುವದಕ್ಕೆ ಇವರೇ ಉದಾಹರಣೆ.
ಬಬಲೆಶ್ವರ ಗ್ರಾಮದ ಗೌಡಕಿ ಮನೆತನದವರಾಗಿದ್ದ ಅಣ್ಣಾಸಾಹೇಬ ವಿ ಪಾಟೀಲರು ೨೬-೦೮-೧೯೬೭ ರಂದು ಬಬಲೆಶ್ವರದಲ್ಲಿ ಜನಿಸಿದರು. ಬಾಲ್ಯದಿಂದಲೇ ಸಾಧನೆಯತ್ತ ಗುರಿಯಿಟ್ಟಿದ್ದ ಅವರು ವಿಯಜಪುರದಲ್ಲಿ ಶಿಕ್ಷಣವನ್ನ ಮುಗಿಸಿ ಸ್ವಗ್ರಾಮದ ಮಠದ ಸೇವೆಯಲ್ಲಿ ಸಹ ತೊಡಗಿದರು. ಜೊತೆ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮೈಗೂಡಿಸಿಕೊಂಡಿದ್ದರು.

ನಂತರ ಸಾಂಸಾರಿಕ ಬದುಕಿಗೆ ಕಾಲಿಟ್ಟ ಅವರು ವ್ಯಾಪಾರ ಅಥವಾ ನೌಕರಿ ಮಾಡುವ ಇಚ್ಛೆವ್ಯಕ್ತಪಡಿಸುವುದರಲ್ಲಿ ಅಣ್ಣಾಸಾಹೇಬರ ಧರ್ಮಪತ್ನಿ ಸುನಂದಾ ಪಾಟೀಲರಿಗೆ ಬಾಗಲಕೋಟೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಒದಗಿಬಂತು.
ಹೀಗಾಗಿ ಸಂಸಾರದ ಗಂಟು ಮೂಟೆ ಬಾಗಲಕೋಟೆಗೆ ಬಂದು ನೆಲಸಿತು. ಆಗ ಸಹೋಧರ ಸಂಭಂಧಿ ಶಂಕರ ಅರಶಿನಗುಡಿಯವರ ಒತ್ತಡಕ್ಕೆ ಮಣಿದು ಬಾಗಲಕೋಟೆಯ ಸೈಕಲ್ ಶಾಪ್ ಒಂದರಲ್ಲಿ ಕರ್ತವ್ಯನಿರ್ವಹಿಸಲು ಮುಂದಾದರು.
ದಿನಕಳೆದAತೆ ಮೇಡಿಕಲ್ ರಿಪ್ಪ್ರೆಸೆಂಟೇಟಿವ್ ಒಬ್ಬರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಬ್ಯೋ ವಿಟ್ಯಾಮಿನ್ಸ್ ಕಂಪನಿಯಲ್ಲಿ ೧೫ ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿದ ಅನುಭವದ ಆಧಾರದ ಮೇಲೆ ತಾವೆ ಒಂದು ಕಂಪನಿ ತಗೆದರೆ ಹೇಗೆ ಎಂಬ ಆಲೋಚನೆ ಬಂದಾಗ ಕೇವಲ ಎರಡು ಬ್ರ‍್ಯಾಂಡಗಳ ಎರಡು ಪ್ರಾಡಕ್ಟ್ ಗಳೊಂದಿಗೆ ಕಂಪನಿ ಪ್ರಾರಂಬಿಸಿದರು.

ಅಷ್ಟೊತ್ತಿಗೆ ದರ್ಮಪತ್ನಿ ಸುನಂದಾ ಪಾಟೀಲರಿಗೆ ಸರ್ಕಾರಿ ನೌಕರಿಯ ಭ್ಯಾಗ್ಯ ದೊರಕಿತ್ತು ಮತ್ತು ಅವರಿಗೆ ಬೆಳಗಾವಿಯ ಆರ್.ಪಿ.ಡಿ ಕಾಲೇಜಿನಲ್ಲಿ ಪ್ರೋಪೆಸರ್ ಆಗಿ ನಿಯೂಕ್ತಿಯ ಆದೇಶ ಪತ್ರ ಬಂದಿತ್ತು. ಹೀಗಾಗಿ ಸಂಸಾರದ ಬಂಡಿಯನ್ನ ಬೆಳಗಾವಿಗೆ ತಂದ ಪಾಟೀಲ ಕುಟುಂಬಕ್ಕೆ ಮಗನಾಗಿ ವಿವೇಕ ಹಾಗೂ ಮಗಳಾಗಿ ವರ್ಶಾ ಎಂಬ ಮಕ್ಕಳು ಇದ್ದಾರೆ.
ಸಧ್ಯ ಇವರ ಬೈಯೋವಿಜನ್ ಕಂಪನಿಯಲ್ಲಿ ೫೦ಕ್ಕು ಹೆಚ್ಚು ಜನರು ಕರ್ತವ್ಯ ನಿರ್ವಹಿಸುತಿದ್ದು ಸಾರ್ತಕ ಬದುಕಿನೆಡೆ ಸಾಗಿದೆ ಇವರ ಬದುಕು.
ಸಧ್ಯ ೧೨೦ಕ್ಕು ಹೆಚ್ಚು ಪ್ರಾಡಕ್ಟ್ಗಳಿರುವ ಉತ್ತರ ಕರ್ನಾಟಕದ ಹೆಮ್ಮೆಯ ಕಂಪನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಂದು ಅಲ್ಪ ಮಟ್ಟದ ಹಣತೊಡಗಿಸಿ ಪ್ರಾರಂಭಿಸಿದ್ದ ಕಂಪನಿ ಇವತ್ತು ವರ್ಷಕ್ಕೆ ಕೋಟ್ಯಂತರ ರೂ ವಹೀವಾಟು ಮಾಡುತ್ತಿರುವದು ಒಂದು ಹೆಮ್ಮೆಯೇ ಸರಿ. ಉತ್ತಮ ಗುಣಮಟ್ಟದ ಹಾಗೂ ಪಾರದರ್ಶಕ ಕಂಪನಿಯನ್ನು ಮುನ್ನಡೆಸುತ್ತಿರುವ ಅಣ್ಣಾಸಾಹೇಬ ವಿ ಪಾಟೀಲರ ಛಲಕ್ಕೆ ನಮ್ಮದೊಂದು ಸಲಾಂ… ಹಾಗೂ ಇಂದು ಅವರ ೨೫ನೆ ವರ್ಷದ ಮದುವೆಯ ವಾರ್ಷಿಕೋತ್ಸವದ ದಿನ, ಹೀಗಾಗಿ ಈ ಮೂಲಕ ಶುಭಾಷಯಗಳು.