ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣೆ

0

ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣೆ

ದಿನಾಂಕ : ೨೮-೦೧-೨೦೨೧ ರಂದು ಗೋಕಾಕ ನಗರದ ಎನ್.ಎಸ್. ಎಫ್. ಅತಿಥಿ ಗೃಹದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನೀಡಲಾಗುವ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು
ಫಲಾನುಭವಿಗಳಿಗೆ ವಿತರಿಸಿ, ಜನರು ವಿಕಲಚೇತನರಿಗೆ ಅನುಕಂಪ ತೋರಿಸುವ ಬದಲಾಗಿ ಅವರು ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಸಿಕೊಡಬೇಕೆಂದು ಶಾಸಕರು ಸಲಹೆ ನೀಡಿದರು. ಅಲ್ಲದೆ ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿದೆ. ಅವುಗಳ
ಸದುಪಯೋಗ ಪಡೆದುಕೊಂಡು
ಬದುಕು ಹಸನಾಗಿಸಿಕೊಳ್ಳಲು ಶಾಸಕ ಬಾಲಚಂದ್ರ ಜಾರತಿಹೊಳಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್. ಬಿ. ಬನಶಂಕರಿ, ವಿಕಲಚೇತನರ ತಾಲೂಕಾ ನೋಡಲ್ ಅಧಿಕಾರಿ ಉಮಾ ಬಳ್ಳೊಳ್ಳಿ, ಜಿ.ಪಂ ಸದಸ್ಯ ಗೋವಿಂದ,
ಕೊಪ್ಪದ, ಪ್ರಭಾ ಶುಗರ್ಸ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ಟಿಪಿಎಂ ಗೋಪಾಲ್ ಕುದರಿ, ಟಎಪಿ ಎಮ್ ಸಿ ನಿರ್ದೇಶಕ ವೆಂಕನಗೌಡ ಪಾಟೀಲ್, ಬಸಲಿಂಗ ಕೆಳಗಡೆ, ಶಿವಾನಂದ ದೊಡಕೆಂಚನ್ನವರ ಅಡಿವೆಪ್ಪ ಬಿಲಕುಂದಿ ಮತ್ತು ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು.