ಕಾಮಗಾರಿ ಸ್ಥಳದಿಂದ ಯಂತ್ರಗಳ ಸಮೇತ ಕಾಲ್ಕಿತ್ತ ಗುತ್ತಿಗೆದಾರ

0

ಬೆಳಗಾವಿ: ರೈತರ ವಿರೋಧದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಸ್ಥಗಿತಗೊಂಡಿರುವ ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿಯನ್ನು

ದಿಢೀರನೇ ಗುತ್ತಿಗೆದಾರರು ಮತ್ತೆ ಆರಂಭಿಸಿದ್ದರಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.

ಗುತ್ತಿಗೆದಾರರು ಕೆಲಸ ಆರಂಭಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈತರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದರು.”ಕಾಮಗಾರಿಗೆ ಸಂಬಂಧಪಟ್ಟಂತೆ ಹೈಕೋರ್ಟ್‍ನಲ್ಲಿ ಕೇಸ್ ಇರುವಾಗ ನೀವು ಹೇಗೆ ಕೆಲಸ ಆರಂಭಿಸಿದ್ದಿರಿ”

ಎಂದು ರೈತರು ಗುತ್ತಿಗೆದಾರನನ್ನು ತರಾಟೆ ತೆಗೆದುಕೊಂಡರು. ಗುತ್ತಿಗೆದಾರ ಹಾಗೂ ಕೆಲಸಗಾರರನ್ನು ಯಂತ್ರಗಳ ಸಮೇತ ಮರಳಿ ಕಳುಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಜು ಮರವೆ, ನಗರ ಅಧ್ಯಕ್ಷ ಹನುಮಂತ ಬಾಳೇಕುಂದ್ರಿ, ಮುಖಂಡರಾದ ಭೂಮೇಶ್ ಬಿರ್ಜೆ, ಮೊನಪ್ಪ ಬಾಳೇಕುಂದ್ರಿ ಇನ್ನಿತರರು ಇದ್ದರು.

ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿ ವಿರೋಧಿಸಿ ರೈತರು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ, ಕಾಮಗಾರಿಯನ್ನು ಹೈಕೋರ್ಟ್ ತಡೆಹಿಡಿದಿದೆ. ಅಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಇಲ್ಲಿನ ರೈತರು ಪ್ರತಿಭಟನೆ ಕೂಡ ನಡೆಸಿದ್ದಾರೆ.