ಲಿಂಗಾಯತರಿಗೆ ತಕ್ಷಣವೇ ‘ 2ಎ’ ಮೀಸಲಾತಿ ನೀಡುವುದು ಕಷ್ಟ : ಮುರುಗೇಶ್ ನಿರಾಣಿ

0

ಬೆಳಗಾವಿ : ಲಿಂಗಾಯತರಿಗೆ ಮೀಸಲಾತಿ ದೊರೆಬೇಕು ಎನ್ನುವುದರಲ್ಲಿ ನಾನು ಒಬ್ಬನಾಗಿದ್ದೇನೆ.  ಸಮಾಜದ ಕಟ್ಟ ಕಡೆಯ ಜನರಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಆದ್ರೆ ತಕ್ಷಣವೇ ‘ 2ಎ’ ಮೀಸಲಾತಿ ಪಟ್ಟಿಗೆ ಸೇರಿಸುವುದು ಕಷ್ಟದ ವಿಷಯ ಅಂತಾ   ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ  ತಿಳಿಸಿದರು.

 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತರ’ 2ಎ’ ಮೀಸಲಾತಿ ಹೋರಾಟದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರ ನಿಮ್ಮೊಂದಿಗೆ ಚರ್ಚಿಸಲು ಸಿದ್ಧವಾಗಿದೆ. ಆದ ಕಾರಣ ಸಮುದಾಯದ ಜನರು ಹೋರಾಟ ಕೈ ಬಿಟ್ಟು ಮಾತುಕತೆಗೆ ಬರಬೇಕು ಎಂದು ಮನವಿ ಮಾಡಿಕೊಂಡರು.

 

ಸಮುದಾಯದ ಎಲ್ಲರೂ ಸೇರಿ ಚರ್ಚಿಸಿ, ಸಮಿತಿ ರಚಿಸೋಣ. ಬಳಿಕ ಆ ಜವಾಬ್ದಾರಿಯನ್ನು ನಾವೇ ವಹಿಸಿಕೊಂಡು ಸಿಎಂ ಅವರ ಮನವೊಲಿಸೋಣ. ಮೀಸಲಾತಿ ಹೋರಾಟದಲ್ಲಿ ಯಾರಿಗೂ ಅನ್ಯಾಯವಾಗಬಾರದು, ಆ ರೀತಿಯಾಗಿ ರೂಪು ರೇಷಗಳನ್ನು ಸಿದ್ಧಪಡಿಸೋಣ. ಪಾದಯಾತ್ರೆ  ಮೂಲಕ ಅರಿವು ಮೂಡಿಸಲಾಗಿದೆ. ಆದ್ದರಿಂದ ಚರ್ಚೆ ಬರುವಂತೆ ವಿನಂತಿಸಿಕೊಂಡರು.

 

ಇನ್ನೂ ರಾಜ್ಯದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಇಲ್ಲ. ಆದ ಕಾರಣ ಗಣಿ ಇರುವ ಜಾಗದಲ್ಲಿ ವಿಶ್ವ ವಿದ್ಯಾಲಯ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ.  ಈ ಬಗ್ಗೆ ಸಿಎಂನೊಂದಿಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.