ಕ್ರಷರ್ ನ ಲೈಸನ್ಸ್ ರದ್ದ

0

ಶಿವಮೊಗ್ಗ: ಸಮೀಪದ ಹುಣಸೋಡು ಗ್ರಾಮದಲ್ಲಿ ಜ.21ರ ರಾತ್ರಿ ಸಂಭವಿಸಿದ ಸ್ಪೋಟ ಪ್ರಕರಣದ ಕ್ರಷರ್ ನ ಲೈಸನ್ಸ್ ರದ್ದಾಗಿದೆ. ಜಿಲ್ಲಾಧಿಕಾರಿ ಶಿವಕುಮಾರ್ ಅವರು ಎಸ್.ಎಸ್. ಕ್ರಷರ್ ನ ಲೈಸನ್ಸ್ ರದ್ದುಪಡಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಕೇವಲ ಕಲ್ಲು ಪುಡಿ ಮಾಡಲು ಅನುಮತಿ ಪಡೆದು, ಅಕ್ರಮವಾಗಿ ಸ್ಪೋಟಕ ಸಂಗ್ರಹ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಸ್ಪೋಟದ ಸದ್ದು ನೂರು ಕಿ.ಮಿ. ದೂರದವರೆಗೆ ಕೇಳಿ ಬಂದು ಜನರಿಗೆ ಆತಂಕ ಉಂಟಾಗಿತ್ತು.