ಅಧ್ಯಕ್ಷರಾಗಿ ನೀಲವ್ವ ಕರೋಳಿ ಹಾಗೂ ಉಪಾಧ್ಯಕ್ಷರಾಗಿ ಲಗಮಣ್ಣಾ ಗುರವ ಅವಿರೋಧವಾಗಿ ಆಯ್ಕೆ

0

ಯಮಕನಮರಡಿ: ಸಮೀಪದ ಬಸಾಪುರ ಗ್ರಾಮ ಪಂಚಾಯ್ತಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನೀಲವ್ವ ಕರೋಳಿ ಹಾಗೂ ಉಪಾಧ್ಯಕ್ಷರಾಗಿ ಲಗಮಣ್ಣಾ ಗುರವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ನೀಲವ್ವ, “ಶಾಸಕ ಸತೀಶ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅವಿರೋಧ ಆಯ್ಕೆ ಮಾಡಲಾಗಿದೆ.  ಶಾಸಕರ ನೇತೃತ್ವದಲ್ಲಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಗ್ರಾಮದ ಮುಖಂಡರು ಸನ್ಮಾನಿಸಿದರು. ಮುಖಂಡರಾದ ಯಲ್ಲಪ್ಪ ಕಾಶನವರ, ಯಲ್ಲಪ್ಪ ನಾಯ್ಕ್,  ಪಾಂಡು ಮಣ್ನಿಕೇರಿ, ವಿನೋದ ಡೊಂಗ್ರೆ, ಮಾರುತಿ ಗುಟಗುದ್ದಿ, ವಿಠ್ಠಲ ಬರನವರ, ನಿಂಗಪ್ಪ ಬಂಜರಾಮ, ಬಸವರಾಜ ಡುಮ್ಮನಾಯಿಕ, ದಯಾನಂದ ಚಚಡಿ, ಈರಣ್ಣ ಜಗಜಂಪಿ, ಗರೇಶ ಪಾಟೀಲ, ಮಾರುತಿ ಡಕ್ಕ, ಈರಪ್ಪ ಬಂಜರಾಮ ಇದ್ದರು.