ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಲಹೊಂಗಲ ಪಿ ಎಸ್ ಈರಣ್ಣ ರಿತ್ತಿ ಅವರು ನಿಮ್ಮ ಸುರಕ್ಷತೆಯೆ ನಮ್ಮ ಧ್ಯೇಯ, ಒಂದೇ ದೇಶ ಒಂದೇ ತುರ್ತು ಕರೆ

0

ಬೈಲಹೊಂಗಲ: ಸಮೀಪದ ಯರಡಾಲ ಗ್ರಾಮದ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಲಹೊಂಗಲ ಪಿ ಎಸ್ ಈರಣ್ಣ ರಿತ್ತಿ ಅವರು ನಿಮ್ಮ ಸುರಕ್ಷತೆಯೆ ನಮ್ಮ ಧ್ಯೇಯ, ಒಂದೇ ದೇಶ ಒಂದೇ ತುರ್ತು ಕರೆ ಸಂಖ್ಯೆ-112 ಎಂಬ ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರ ಗಮನಕ್ಕೆ ತರುವ ಸಂಗತಿ ಎನಂದರೆ ತಾವು ಹೋಗುವ ದಾರಿಯಲ್ಲಿ ಅಪಘಾತ ಸಂಭವಿಸಿದಲ್ಲಿ ಅಥವಾ ಯಾವದೋ ಗುಡಿಸಲಿಗೆ ಬೆಂಕಿ ಹತ್ತಿ ಸುಡುತ್ತಿರುವಾಗ. ತುರ್ತು ಸೇವೆಗಾಗಿ 112 ನಂಬರಿಗೆ ಕರೆ ಮಾಡಿದರೆ ಸಾಕು ಕೇವಲ 15 ಸೆಕೆಂಡದಲ್ಲಿ ಜಿಪಿಎಸ್ ಅಳವಡಿಸಿದ ವಾಹನವು ಸ್ವಯಂಚಾಲಿತ ಸ್ಥಳ ಗುರುತಿಸಿ ನೀವು ನಿಂತ ಸ್ಥಳಕ್ಕೆ ನಮ್ಮ ಪೋಲೀಸ ವಾಹನ ಬಂದು ನಿಲ್ಲುತ್ತದೆ. ಯಾವದೆ ಸ್ಥಳದಲ್ಲಿ ಗಲಾಟೆಗಳು ಕಂಡುಬಂದರೆ ತಕ್ಷಣ 112 ನಂಬರಿಗೆ ಕರೆ ಮಾಡಿದರೆ ಸಾಕು ತಮ್ಮ ಮನೆ ಬಾಗಿಲಿಗೆ ಪೋಲೀಸ ವಾಹನ ಬಂದು ಯಾಕೆ ಅಂತ ವಿಚಾರಿಸುತ್ತಾರೆ. ಈ ಸಂದೇಶವನ್ನು ತಮ್ಮ ರಕ್ತ ಸಂಬಂಧಿಯಾಗಿರಬಹುದು ಅಥವಾ ಮಿತ್ರರಾಗಿರಬಹುದು ಅವರಿಗೂ ತಿಳಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ಪೋಲಿಸ್ ಠಾಣೆಯ ಬೀಟ ಸಿಬ್ಬಂದಿ ಡಿ ಎಮ್ ದರಗದ, ಮತ್ತು ಎಸ್ ಸಿ ಕರಿವಿಣ್ಣವರ, ಎಸ್ ಯು ಮೇಣಸಿನಕಾಯಿ ಉಪಸ್ಥಿತರಿದ್ದರು.

ಈ ವೇಳೆ ಗ್ರಾ.ಪಂ ಸದಸ್ಯ ಬಸನಗೌಡ ಪಾಟೀಲ, ಸುರೇಶ ಹೂಗಾರ, ನಾಗಪ್ಪ ಬೈಲಪ್ಪನವರ, ರಾಯಪ್ಪ ಪೂಜೇರ
ಬಸಲಿಂಗಯ್ಯ ಪೂಜೇರ , ಆನಂದ ಕುಲಕರ್ಣಿ ಹಾಗೂ ಅಂಗನವಾಡಿ ಕಾರ್ಯಕರ್ತರು ,ಶಾಲೆಯ ಶಿಕ್ಷಕರ ವೃಂದ ಮತ್ತು ಶಾಲಾ ಮಕ್ಕಳು ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು. ಬಸವರಾಜ ಅಂಕಲಗಿ ನಿರೂಪಿಸಿದರು
ವಿಜಯ ಬನಶೆಟ್ಟಿ ವಂದಿಸಿದರು.