ಮಗುವಿನ ಪ್ರಾಣ ಉಳಿಸುವಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಚಿಕಮಕ್ಕಳ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸಂತೋಶ ಕುರಬೆಟ್ ಯಶಸ್ವಿ

0

ಸುಮಾರು 2 ಕೆಜಿ ತೂಗುವ ಗಂಡು ಹಸುಗೂಸು ತೀವ್ರ ಹೊಟ್ಟೆ ಉಬ್ಬುವಿಕೆಯಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು. ಆಸ್ಪತ್ರೆಗೆ ತೆಗೆದುಕೊಂಡು ಬಂದ ತಕ್ಷಣ ಸಮಗ್ರವಾಗಿ ತಪಾಸಿಸಿದಾಗ ಮತ್ತೊಂದು ಕರುಳು ಬೆಳೆಯುತ್ತಿರುವದು ಕಂಡು ಬಂದಿತು. ಇದರಿಂದ ಜೀವಕ್ಕೆ ಅಪಾಯವಾಗುವ ಲಕ್ಷಣಗಳಿದ್ದ ಕಾರಣ ಶಸ್ತ್ರಚಿಕಿತ್ಸೆ ನೆರವೇರಿಸಲು ಅಣಿಯಾದಾಗ ಮತ್ತೆ ಸಂಕಷ್ಟ ಎದುರಾಯಿತು, ಆದರೂ ಕೂಡ 3 ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುವದರ ಮೂಲಕ ಮಗುವಿನ ಪ್ರಾಣ ಉಳಿಸುವಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಚಿಕಮಕ್ಕಳ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸಂತೋಶ ಕುರಬೆಟ್ ಯಶಸ್ವಿಯಾಗಿದ್ದಾರೆ.
ರಾಜ್ಯದ ಗಡಿಯಲ್ಲಿರುವ ಕೂಗನೊಳ್ಳಿ ಗ್ರಾಮದಲ್ಲಿ ಆಗ ತಾನೆ ಜನಿಸಿದ ಮಗುವಿನ ಹೊಟ್ಟೆ ಊದಿಕೊಳ್ಳಲು ಪ್ರಾರಂಭಿಸಿದಾಗ ವೈದ್ಯರು ತಪಾಸಿಸಿ, ಕರುಳಿನ ಹತ್ತಿರವೇ ಮತ್ತೊಂದು ಕರುಳು ಬೆಳೆಯುತ್ತಿರುವದು ಕಂಡು ಬಂದಿತು. ಅಲ್ಲದೇ ಕರುಳಿನಲ್ಲಿ ತಡೆಯುಂಟಾಗಿ ಯಾವುದೇ ಕಾರ್ಯಗಳು ನಡೆಯುತ್ತಿರಲಿಲ್ಲ. ಇದರಿಂದ ಮಗು ಬದುಕುಳಿಯುವದು ಅತ್ಯಂತ ಕಠಿಣವಾಗಿತ್ತು. ಸುಮಾರು ಎರಡುವರೆ ಗಂಟೆಗೂ ಅಧಿಕ ಸಮಯದವರೆಗೆ ನಡೆದ 3 ಶಸ್ತ್ರಚಿಕಿತ್ಸೆಯಲ್ಲಿ, ಕರುಳಿನ ಪಕ್ಕದಲ್ಲಿ ಬೆಳೆದ 25 ಸೆ. ಮೀ ಹೆಚ್ಚುವರಿ ಕರಳು, ಇಲಿಯಲ್ ಅಟ್ರೆಸಿಯಾ ಹಾಗೂ ತಡೆಯೊಡ್ಡಲ್ಪಟ್ಟಿದ್ದ ಕರಳನ್ನು ಪುನಃ ಪ್ರಾರಂಭಿಸಿ ಮಗುವಿನ ಹೊಟ್ಟೆಯ ಕಾರ್ಯಗಳು ಸುಲಲಿತವಾಗಿ ನಡೆಯುವಂತೆ ಮಾಡಲಾಯಿತು.ಶಸ್ತ್ರಚಿಕಿತ್ಸೆಯ ನಂತರ ಕೇವಲ 12 ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು.

ಕೇವಲ ಎರಡು ಕೆಜಿ ತೂಗುವ ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸುವದು ಅತ್ಯಂತ ಕಠಿಣ. ಇದಕ್ಕಾಗಿ ವಿಶೇಷ ಪರಿಣಿತಿಯನ್ನು ಪಡೆದುಕೊಂಡಿರಬೇಕು.ಈ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕ ಆರೋಗ್ಯ ಹಾಗೂ ಆಯುಷ್ಯಮಾನ ಭಾರತ ಯೋಜನೆಯಡಿ ಉಚಿತವಾಗಿ ನೆರವೇರಿಸಲಾಗಿದೆ.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ ಕುರಬೆಟ್ ಅವರಿಗೆ ಡಾ. ಎಸ್ ಎಂ ಧಡೇದ, ಡಾ. ಮನಿಷಾ ಭಾಂಡನಕರ, ಡಾ. ಅನಿಲ ಕಲ್ಲೇಶ, ಡಾ. ಮಹಾಂತೇಶ ಪಾಟೀಲ, ಅರವಳಿಕೆ ತಜ್ಞವೈದ್ಯರಾದ ಡಾ. ಪವನ ಧುಳಖೇಡ ಅವರು ಸಾಥ ನೀಡಿದರು. ಬಾಲಕನ ಪಾಲಕರು ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಂತೋಷ ಕುರಬೆಟ ಹಾಗೂ ಅವರ ತಂಡವನ್ನು ಕೆಎಲ್‍ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ ಎಸ್ ಮಹಾಂತಶೆಟ್ಟಿ ಅವರು ಅಭಿನಂದಿಸಿದ್ದಾರೆ.

 

Rare surgical procedure saves the life a new born

 

A new born baby with multiple birth anomalies in critical state shifted to KLES Dr. Prabhakar Kore Hospital, Belagavi from a private hospital of Kugnoli (Chikkodi Taluk). Dr. Santosh Kurbet, Senior Pediatric Surgeon examined the baby & investigations revealed the baby is suffering from intestinal atresia (blockage in small intestine). The baby had multiple episodes of vomiting, hard, swollen abdomen & failure to pass motion.

Dr. Santosh Kurbet and team counselled the parents, obtained high risk consent for surgery &immediately posted the baby for surgery. Operating on a newborn with 2 Kgs of weight is a challenge& involves great amount of risk. On opening the abdomen to the surprise of Surgeon the baby had three major anomalies such as;

 

  1. Ileal duplication (extra growth of about 25 cms length of intestine)
  2. Ileal atresia (blockage in intestine) and
  3. Twisted intestine (Malrotation of the gut).

 

All the three complex birth defects were surgically corrected in over 3-hour long surgery on a new born baby. Baby very well withstood anesthesia support &surgery. Post surgically baby was stabilized by a highly specialized team of neonatologists, specially trained nurses and respiratory therapists who have years of expertise in treating complex neonates. The multi-disciplinary team consisted of Dr S M. Dhaded, Dr Manisha  R. Bhandankar, Dr Anil Kallesh, Dr N S. Mahanshetti, Dr Mahantesh V. Patil. Post operatively infant recovered well and is discharged from hospital.

It needs higher degrees of micro surgical skills, perseverance and tremendous patience to operate on child which is just born and weighing 2 Kgs opined Dr. M V Jali and he congratulated the entire team for their efforts in saving life of a child.

The complete care was covered under Ayushman Bharat Arogya Karnataka scheme. Such cases are rare in the medical literature. Dr Prabhakar Kore, Chairman KLE Society, congratulated the whole team for this rare achievement.