GST ಕಾಯ್ದೆಯ ಸರಳೀಕರಣಕ್ಕಾಗಿ ಆಗ್ರಹಿಸಿ ಪ್ರತಿಭಟನೆ

0

GST ಕಾಯ್ದೆಯ ಸರಳೀಕರಣಕ್ಕಾಗಿ ಆಗ್ರಹಿಸಿ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳಿಗೆ ಬೆಳಗಾಂವ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಪರವಾಗಿ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಉಪಾಧ್ಯಕ್ಷರು ಮಹಾಂತೇಶ ಮುದ್ನುರ ಮಾತನಾಡಿ 2017 ರಲ್ಲಿ ಅನುಷ್ಠಾನಕ್ಜೆ ಬಂದ ಕಾಯ್ದೆಗೂ ಇವತ್ತು ಇದ್ದ ಕಾಯ್ದೆಗೂ ಅಜಗಜಾಂತರ ವೆತ್ಯಾಸ ಇರುವ ಕಾರಣದಿಂದ ವ್ಯಾಪಾರಸ್ಥರಿಗೆ ತೊಂದರೆ ಆಗಿದೆ ಹಾಗೂ ಸುಗಮವಾದ ತಂತ್ರಜ್ಞ ಪೂರೈಕೆಯಲ್ಲಿನ ಅಡೆ ತಡೆಯಿಂದ ಕಾರ್ಯದಲ್ಲಿ ಅಡಚಣೆ ಉಂಟಾಗುತ್ತಿದೆ ಎಂದು ಹೇಳಿದರು.

ತೆರಿಗೆ ಸಲಹೆಗಾರರು ಶೇತುವೆ ಇದ್ದಂತೆ, ಅವರಿಂದ ಸೂಕ್ತ ಸಲಹೆಗಳೂ ಬಂದರೆ ಇಲಾಖೆಯೂ ಸ್ವಿಕರಿಸುತ್ತದೆ ಎಂದು ಜಂಟಿ ಆಯುಕ್ತರು ಹೇಳಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರು ಹೊಳೆಬಸಪ್ಪ ಹನಗಂಡಿ, ಉಪಾಧ್ಯಕ್ಷರು ಮಹಾಂತೇಶ ದಾದಿಗುಂದಿ, ಕಾರ್ಯದರ್ಶಿಗಳು ಸಂಜೀವ್ ಬಾಡಗಂಡಿ ಖಜಾಂಚಿಗಳ ಹಾಗೂ ಸರ್ವ ಸದಸ್ಯರು, ಪ್ರತಿನಿಧಿಗಳು ಉಪಸ್ಥಿತರಿದ್ದರು. ಮನವಿಯನ್ನು ರಾಜ್ಯ ಮತ್ತು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳಿಗೆ ಹಾಗೂ ಆದಾಯ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಲಾಯಿತು.