ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬಾಪೂಜಿ ಪುಣ್ಯಸ್ಮರಣೆ

0

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಬಾಪೂಜಿ ಪುಣ್ಯಸ್ಮರಣೆ

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯನ್ನು ಆಚರಿಸಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಶ್ರೀ ವಿನಯ ನಾವಲಗಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಶೇಖರ ಈಟಿ, ಶ್ರೀ ವಿಜಯಕುಮಾರ ಹುಣಶ್ಯಾಳ, ಶ್ರೀ ಮಾರುತಿ ಜೋಯಿ, ಶ್ರೀ ಬಾಳೇಶ ದಾಸನಟ್ಟಿ, ಶ್ರೀ ಮಂಜುನಾಥ ಕಾಂಬಳೆ, ಶ್ರೀ ಜಗದೀಶ ಸಾವಂತ, ಶ್ರೀಮತಿ ಅನ್ನಪೂರ್ಣ ಅಸೂರಕರ್, ಶ್ರೀಮತಿ ಆಯೇಶಾ ಸನದಿ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.