ಫೆ.1 ರಿಂದ ಸಾರ್ವಜನಿಕರಿಗೆ ಯಲ್ಲಮ್ಮ ದೇವಿ ದರ್ಶನ

0

ಬೆಳಗಾವಿ, ಜ. 31- ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವನ್ನು ಫೆ.1ರಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಕೋವಿಡ್–19 ಮಾರ್ಗಸೂಚಿಗಳನ್ನು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಹೆಚ್ಚಿನ ಜನಸಂದಣಿ ಸೇರುವಂತಹ ವಿಶೇಷ ಉತ್ಸವ, ಜಾತ್ರೆಯಂತಹ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಅಂಗಡಿಗಳನ್ನು ತೆರೆಯು ವಂತಿಲ್ಲ. ಯಾತ್ರಿ ನಿವಾಸ, ಅತಿಥಿ ಗೃಹ, ವಸತಿ ಸಂಕೀರ್ಣ ಅಥವಾ ಕಲ್ಯಾಣ ಮಂಟಪವನ್ನು ಸಾರ್ವಜನಿಕರಿಗೆ ನೀಡುವಂತಿಲ್ಲ. ಮಾರ್ಗಸೂಚಿ ಉಲ್ಲಂಘನೆ ಕಂಡು ಬಂದಲ್ಲಿ ಅವಕಾಶ ನೀಡಿರುವ ಈ ಆದೇಶ ರದ್ದುಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.

ರಾಜ್ಯದೊಂದಿಗೆ ಹಲವು ಹೊರ ರಾಜ್ಯಗಳ ಸಾವಿರಾರು ಭಕ್ತರು ಸೇರುವುದರಿಂದಾಗಿ, ಕೋವಿಡ್–19 ಕಾರಣದಿಂದ ಈ ದೇವಸ್ಥಾನದಲ್ಲಿ ಸಾರ್ವ ಜನಿಕ ದರ್ಶನವನ್ನು 2020ರ ಮಾರ್ಚ್‌ 18ರಿಂದ ನಿಷೇಧಿಸಲಾಗಿತ್ತು.