7 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಇಂದು ನಡದಿತ್ತು

0

ಬೆಂಗಳೂರು, ಫೆ. 2- ರಾಜ್ಯದಲ್ಲಿ ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆ ಸಿದ್ದಾರೆ.

ಬೆಂಗಳೂರು, ಬಳ್ಳಾರಿ, ಕೋಲಾರ, ಧಾರವಾಡ, ಕೊಪ್ಪಳ, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಆರಂಭಿಸಲಾಗಿದೆ.

ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಎಂಜಿನಿಯರ್ ದೇವರಾಜ್ ಕಲ್ಲೇಶ್, ಬೆಂಗಳೂರಿನ ಸಹಕಾರ ಇಲಾಖೆ ಜಂಟಿ ರಿಜಿ ಸ್ಟ್ರಾರ್ ಪಾಂಡರಂಗ ಗರಗ, ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಜಂಟಿ ನಿರ್ದೇಶಕ ಕೆ.ವಿ. ಜಯರಾಜ್, ಕೋಲಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಎಸ್.ಎನ್. ವಿಜಯಕುಮಾರ್, ಕೊಪ್ಪಳದ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ. ಶ್ರೀನಿವಾಸ್, ಲೋಕೋಪಯೋಗಿ ಇಲಾಖೆಯ ಮಾಗಡಿ ಉಪವಿಭಾಗದ ಕಿರಿಯ ಎಂಜಿನಿಯರ್ ಚನ್ನಬಸಪ್ಪ, ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್‌) ಶ್ರೀನಿವಾಸ್ ಅವರ ಮನೆ ಮಲೆ ದಾಳಿ ನಡೆಸಲಾಗಿದೆ.

ಈ ಅಧಿಕಾರಗಳು ಆದಾಯ ಮೀರಿ ಆಸ್ತಿ ಗಳಿಸಿರುವ ಮಾಹಿತಿ ಆಧರಿಸಿ ಶೋಧ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಕಾರ್ಯಕಾರಿ ಎಂಜಿನಿಯರ್ ದೇವರಾಜ ಶಿಗ್ಗಾವಿ ಮನೆ ಮೇಲೆ ಎಸಿಬಿ ದಾಳಿ

ಹುಬ್ಬಳ್ಳಿ ವರದಿ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾ ಹಕ ಎಂಜಿನಿಯರ್ ದೇವರಾಜ ಶಿಗ್ಗಾವಿ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆ ಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಮನೆ, ಕೋಟಿ ಲಿಂಗೇಶ್ವರ ನಗರ ಮತ್ತು ವಿದ್ಯಾನಗರದ ಮನೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿ ದ್ದಾರೆ. ಮೂರು ವಾಹನಗಳಲ್ಲಿ ಬಂದ ಅಧಿಕಾರಿಗಳು ತಪಾಸಣೆಯಲ್ಲಿ ಪಾಲ್ಗೊಂಡಿದ್ದಾರೆ.

ದೇವರಾಜ ಶಿಗ್ಗಾಂವಿ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದೇವರಾಜ ಶಿಗ್ಗಾಂವಿ ಈ‌ ಮೊದಲು ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಅವರಿಗೆ ವರ್ಗಾವಣೆಯಾಗಿದ್ದು ಸ್ಥಳ ತೋರಿಸಿಲ್ಲ.

ದೇವರಾಜ ಅವರ ಪತ್ನಿಯ ಸಹೋದರ ಕೃಷ್ಣ ಭೀಮಪ್ಪ ಗಾಡಿ ವಡ್ಡರ ಅವರ ಮಾಲೀಕತ್ವದ ರಾಜೀವ ನಗರದ ಮೂರು ಅಂತಸ್ತಿನ ಮನೆ, ಪತ್ನಿಯ ತಂದೆ ಭೀಮಪ್ಪ ರಾಮಪ್ಪ ಗಾಡಿ ವಡ್ಡರ ಅವರ ಮನೆಯಿರುವ ನಗರದ ಸುಳ್ಳ ರಸ್ತೆಯ ಬಾಲಾಜಿ ನಗರದ ಶ್ರೀರಾಮ ‌ನಿವಾಸ ಮತ್ತು ದೇವರಾಜ ಅವರ ತಾಯಿ ವಾಸವಿರುವ ಕೋಟಿ ಲಿಂಗೇಶ್ವರ ನಗರದ ಎರಡು ಅಂತಸ್ತಿನ ಕುಸುಮಾವತಿ ಕಲ್ಮೇಶ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.