ಕಂಗ್ರಾಳಿ ಕೆ ಎಚ್  ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಇಂದು ಸಮಾನತೆ ಮತಗಳಿಸಿ ದರಿಂದ ಚೀಟಿ ಮುಖಾಂತರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು

0

ಬೆಳಗಾವಿ:  ತಾಲೂಕಿನ 27 ಸದಸ್ಯರುಗಳ ಹಾಗೂ ಗ್ರಾಮಪಂಚಾಯತಿಯ ಒಂದು ಸದಸ್ಯರ ಸ್ಥಾನ ಖಾಲಿ ಇರುವುದರಿಂದ 26 ನೂತನ ಸದಸ್ಯರುಗಳ ಕಂಗ್ರಾಳಿ ಕೆ ಎಚ್  ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಮತದಾನ ಇಂದು ನಡೆಯಿತು
ಸಾಮಾನ್ಯ
ಅಧ್ಯಕ್ಷ ಸ್ಥಾನಕ್ಕೆ    ಕಲ್ಲಪ್ಪ ಪಾಟೀಲ್ ಹಾಗೂ ಯಲ್ಲಪ್ಪ ಪಾಟೀಲ್
ನಾಮಪತ್ರ ಸಲ್ಲಿಸಿದ್ದರು

ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಪಾಟೀಲ್ ಹಾಗೂ ಮಧು ಪಾಟೀಲ್ ನಾಮಪತ್ರ ಸಲ್ಲಿಸಿದರು

ಕಂಗ್ರಾಳಿ ಕೆ ಚ್  ಗ್ರಾಮ ಪಂಚಾಯಿತಿ ಚುನಾವಣಾ ಅಧಿಕಾರಿಯನ್ನಾಗಿ ಗ್ರಾಮೀಣ ಕುಡಿಯುವ ನೀರು ಅಭಿವೃದ್ಧಿ ಸಹಾಯಕ ಇಂಜಿನಿಯರ್  ಸುಭಾಷರ ಆರ್ ಹಂಪಿಹೊಳಿ
ಇವರ ಸಮ್ಮುಖದಲ್ಲಿ ಇಂದು ಗ್ರಾಮ ಪಂಚಾಯತಿಯಲ್ಲಿ ಮತದಾನ ನಡೆಯಿತು.
ಅಧ್ಯಕ್ಷಸ್ಥಾನಕ್ಕೆ ಕಲ್ಲಪ್ಪ ಪಾಟೀಲ್ ಇವರಿಗೆ 13 ಮತ ಪಡೆದಿದ್ದರು ಹಾಗೂ ಯಲ್ಲಪ್ಪ ಪಾಟೀಲ್ ಅವರು 13 ಮತಗಳನ್ನು  ಪಡೆದಿದ್ದರು

ಹಾಗೂ ಉಪಾಧ್ಯಕ್ಷ ಸ್ಥಾನದಲ್ಲಿ ಇರುವ ಜ್ಯೋತಿ ಪಾಟೀಲ 13 ಮತಗಳನ್ನು ಪಡೆದಿದ್ದರು ಮಧು ಪಾಟೀಲ್ ಇವರು ಕೂಡ 13 ಮತಗಳನ್ನು ಪಡೆದಿದ್ದರು.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಸಮಾನತೆಯ ಮತಗಳನ್ನು

ಪಡೆದಿದ್ದರಿಂದ ಚುನಾವಣಾಧಿಕಾರಿ  ಸಮ್ಮುಖದಲ್ಲಿ ಚೀಟಿ ಮುಖಾಂತರ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು.

ಮೊದಲ ಅಧ್ಯಕ್ಷಸ್ಥಾನ ಚೀಟಿ ಮುಖಾಂತರ ಯಲ್ಲಪ್ಪ ಪಾಟೀಲ್ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು
ಉಪಾಧ್ಯಕ್ಷರಾಗಿ ಜ್ಯೋತಿ ಪಾಟೀಲ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿ ಕೊಂಡರು ಈ   ಸಮಯದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ  ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸದಸ್ಯರುಗಳು ಉಪಸ್ಥಿತರಿದ್ದರು