ಶಾಸಕರ ತಾಯಿ ಗ್ರಾಪಂ ಅಧ್ಯಕ್ಷೆ !

0

ಕನಕಗಿರಿ, (ಕೊಪ್ಪಳ) ಫೆ. 3-: ಕ್ಷೇತ್ರದ ಶಾಸಕ ಬಸವರಾಜ ದಢೇಸೂಗುರು ಅವರ ತಾಯಿ ದುರುಗಮ್ಮ ದುರಗಪ್ಪ ದಢೇಸೂಗೂರು ಅವರು ಸಿಂಧನೂರು ತಾಲ್ಲೂಕಿನ ದಢೇಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಬುಧವಾರ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದುರುಗಮ್ಮ ಅವರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು.

ಶಾಸಕ ಬಸವರಾಜ ಅವರ ತಂದೆ ದುರುಗಪ್ಪ ದಢೇಸೂಗೂರು ಅವರು ಇದೇ ಗ್ರಾಮ ಪಂಚಾಯಿತಿಯಿಂದ ಆರು ಸಲ ಸದಸ್ಯರಾಗಿ ಹಾಗೂ ಒಂದು ಸಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ. ದುರುಗಮ್ಮ ಸಹ ಎರಡು ಸದಸ್ಯರಾಗಿ ಒಮ್ಮೆ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ದಢೇಸೂಗೂರು ಹಾಗೂ ಹತ್ತಾರು ಕಾರ್ಯಕರ್ತರು ಭಾಗವಹಿಸಿ ದ್ದರು.