ಖಡೇ ಬಜಾರ್ ಠಾಣಾ ಸಿಬ್ಬಂದಿ ಕಾರ್ಯಕ್ಕೆ ಡಿಸಿಪಿ ಮೆಚ್ಚುಗೆ

SC/ST ಕೇಸ್ ಇತ್ಯರ್ಥ: ಎಸಿಪಿ ಸೇರಿ 10 ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವ

0

ಬೆಳಗಾವಿ: ಪರಿಶಿಷ್ಟ ಜಾತಿ, ಪಂಗಡ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿದ ಹಿನ್ನೆಲೆಯಲ್ಲಿ ಖಡೇ ಬಜಾರ್  ಪೊಲೀಸ್

ಠಾಣೆಯ ಎಸಿಪಿ, ಪಿಐ ಸೇರಿ 10 ಜನ ಪೊಲೀಸ್ ಸಿಬ್ಬಂದಿಗೆ  ಬೆಳಗಾವಿ ಡಿಸಿಪಿ ವಿಕ್ರಮ  ಅಮಟೆ  ಅವರು ಬುಧವಾರ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದರು.

ಜ. 22 ರಂದು ಖಡೇ ಬಜಾರ್ ಠಾಣಾ ವ್ಯಾಪ್ತಿ ದಾಖಲಾಗಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ  ಪ್ರಕರಣ ತ್ವರಿತಗತಿಯಲ್ಲಿ  ಬಗೆಹರಿಸಿ  ಆರೋಪಿತರನ್ನು ಬಂಧಿಸಿದ್ದರು.

ಈ ಹಿನ್ನೆಲೆಯಲ್ಲಿ ಎಸಿಪಿ  ಎ.  ಚಂದ್ರಪ್ಪ, ಪಿಐ ಧೀರಜ.ಬಿ. ಶಿಂಧೆ,  ಎಎಸ್ಐ ಜೆ.ಐ. ದೇವಡಿ, ಪೊಲೀಸ್ ಕಾನ್ಸ್ ಟೇಬಲ್ ಗಳಾದ ಎಸ್.ಎಂ.ಶಿಂಧೆ,  ರಮೇಶ. ಬಿ. ಗಣಿ, ವಿ.ಎನ್. ಕಂಟಿಕರ, ಎಂ.ಎಸ್. ಹನಗಂಡಿ, ರಮೇಶ ಅಕ್ಕಿ, ಬಿ.ಎಸ್. ಉಜ್ಜಿನಕೊಪ್ಪ

ಹಾಗೂ ಪಿ.ಎಸ್.ಸನಮನಿ ಅವರ ಕಾರ್ಯಕ್ಕೆ  ಡಿಸಿಪಿ ವಿಕ್ರಮ ಅಮಟೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಪ್ರಶಂಸನಾ ಪತ್ರ,  ನಗದು ಬಹುಮಾನವನ್ನು ವಿತರಿಸಿ   ಗೌರವಿಸಿದರು.