ಅಕ್ರಮ ಪಡಿತರ ಅಕ್ಕಿ ಸಾಗಾಟ

0

ವಿಜಯಪುರ, ಫೆ. 3- ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ ರೂ 7.99 ಲಕ್ಷ ಮೌಲ್ಯದ 296 ಕ್ವಿಂಟಲ್ ಅಕ್ಕಿಯನ್ನು ಬಾಗಲಕೋಟೆಯಿಂದ ಜಿಲ್ಲೆಯ ಮೂಲಕವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಚಾಲಕನ ನ್ನು ಬಂಧಿಸಲಾಗಿದೆ.

ವಿಜಯಪುರ -ನಿಡಗುಂದಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸುವ ಖಚಿತ ಮಾಹಿತಿ ಆಧರಿಸಿ ಪೊಲೀಸ್‌ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಅಕ್ಕಿಯನ್ನು ಸೋಮವಾರ ಲಾರಿಯಲ್ಲಿ (ಕೆಎ29 ಬಿ 8299) ಸಾಗಾಟ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಗದ್ದನಕೇರಿಯ ಚಾಲಕ ಸದ್ದಾಂ ಅಮಿನ್‌ಸಾಬ್‌ ಜಂಗಿ ಎಂಬಾತನ್ನು ಬಂಧಿಸಲಾಗಿದೆ. ಮನಗೂಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.