ಜಾತಿ ವ್ಯವಸ್ತೆಯನ್ನ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಮತ್ತು ಎಲ್ಲಾ ಜನರಿಗೂ ಧಾರ್ಮಿಕ ಹಾಗೂ ಆದ್ಯಾತ್ಮಿಕ ಸಮಾನತೆಯ ಸಲುವಾಗಿ ವಿಶ್ವ ಹಿಂದೂ ಅಂತರಜಾತಿ ವಿವಾಹ ಪ್ರೋತ್ಸಾಹ

0

ಗೋಕಾಕ: ಮನ್ನಿಕೇರಿ ವರದಿ  ಜಾತಿವ್ಯವಸ್ಥೆ ನಿರ್ಮೂಲನೆ ಮಾಡುವುದೇ ಅಂತರಜಾತಿಯ ಪ್ರೋತ್ಸಾಹ ಸಂಘದ ಉದ್ದೇಶ ಮನ್ನಿಕೇರಿ ಶ್ರೀ ವಿಜಯಸಿದ್ದೇಶ್ವರ ಸ್ವಾಮಿಜಿ  ಜಾತಿ ವ್ಯವಸ್ತೆಯನ್ನ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಮತ್ತು ಎಲ್ಲಾ ಜನರಿಗೂ ಧಾರ್ಮಿಕ ಹಾಗೂ ಆದ್ಯಾತ್ಮಿಕ ಸಮಾನತೆಯ ಸಲುವಾಗಿ ವಿಶ್ವ ಹಿಂದೂ ಅಂತರಜಾತಿ ವಿವಾಹ ಪ್ರೋತ್ಸಾಹ ಸಂಘದಿಂದ ಕರೆದ ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷರು ಡಾ:ಆರೂಢಭಾರತಿ ಸ್ವಾಮೀಜಿಗಳು ಮಾತನಾಡಿ ಲವ್ ಜಿಹಾದಿ ಹೆಸರಿನಲ್ಲಿ ಮುಸ್ಲಿಮರು ಹಿಂದೂ ಕನ್ಯಾ ವರಗಳನ್ನು ಮತಾಂದರ್ ಮಾಡಿ ಮಾಡಿ ಹಿಂದುಗಳು ಮುಸ್ಲಿಮರನ್ನು ಮದುವೆಯಾಗಿ ಹಿಂದುಗಳಿಗೆ ಮತಾಂತರ ಮಾಡುವದು ಕೂಡ ನಮ್ಮ ಸಂಘದ ಉದ್ದೇಶ ಎಂದರು.

ಅದಲ್ಲದೆ ಮುಸ್ಲಿಮರಿಗೆ ಪ್ರತಿತಂತ್ರವಾಗಿ ನಾವು ಮಾಡುತ್ತಿದ್ದೆವೆ ಹಿಂದೂಗಳು ಅಂಹಿಸೆ ಸತ್ಯ ತ್ಯಾಗದ ಆದರ್ಶ ಹೇಳುತ್ತದೆ. ಆದರೆ ಗಂಡಸ್ತನ ಕಳೆದುಕೊಳ್ಳಲು ಹೇಳುವದಿಲ್ಲ,, ಮೀಸೆ ಎಲ್ಲಾ ಜಾತಿಯವರಿಗೂ ಮೀಸೆ ಬರುತ್ತದೆ ನಮ್ಮನು ನಾವು ರಕ್ಷಣೆ ಮಾಡಲಿಕ್ಕೆ ಇದನ್ನು ಮಾಡಬೇಕಾಗಿದೆ ಅಂದರು. ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮನ್ನಿಕೇರಿಯ ಶ್ರೀ ವಿಜಯಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಮುಂತಾದವುಗಳನ್ನು, ನಡೆಯದಂತೆ, ಅಂತರಜಾತಿಯ ವಿವಾಹದ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡ ವರಿಗೆ ಆರ್ಥಿಕ ಬಡಕುಟುಂಬಗಳಿಗೆ ನೆರವಾಗುವುದು ನಮ್ಮ ಉದ್ದೇಶ

ಹಾಗೂ ಯಾವುದೇ ತರಹದ ಬಾಲ್ಯವಿವಾಹ ಗಳಿಗೆ ಅನುಮತಿ ನೀಡುವುದಿಲ್ಲ ಜಗತ್ತು ಇವತ್ತು ಎಷ್ಟೇ ಮುಂದುವರೆದರೂ ಸಹ ಇನ್ನೂ ಕೂಡ ನಾನು ಮೇಲು ಮೇಲು ಕೀಳು ಭಾವನೆ ಹೋಗಿಲ್ಲ ಅದು ಹೋಗಲಾಡಿಸಲು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ಆದರೆ ಈ ತಿಳುವಳಿಕೆ ನೀಡುವ ಮೂಲಕ ಎಂದರು ಅಂತರ್ಜಾತಿ ವಿವಾಹ ಮಾಡಿಕೊಳ್ಳುವವರು ಮೊದಲು ಕಾನೂನಿನ ಪ್ರಕಾರ ಸಬ್ ರೆಜಿಸ್ಟರ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು,

ಇವತ್ತು ನಾವು ಕೇವಲ ನಾಲ್ಕು ಜನ ಇದ್ದೇವೆ ಮುಂದಿನ ದಿನಮಾನಗಳಲ್ಲಿ ಎಲ್ಲ ಮಠಾಧೀಶರು ನಮ್ಮ ಜೊತೆಯಲ್ಲಿ ಇರುತ್ತಾರೆ ಎಂದು ಈ ಸಂದರ್ಭದಲ್ಲಿ ಜಗದಾತ್ಮಾನಂದ

ಸ್ವಾಮಿಗಳು ಹಾಗೂ ಶ್ರೀ ಭೀಮಾನಂದ ಸ್ವಾಮಿಗಳು ಕಾರ್ಯದರ್ಶಿಗಳಾದ ಕಲ್ಲಯ್ಯ ಹಿರೇಮಠ ಖಜಾಂಚಿ ಬ್ರಹ್ಮಾನಂದ ಪತ್ತಾರ ಸದಸ್ಯರಾದ ಶಶಿಕಾಂತ, ತಳವಾರ, ಶಂಕರ ರಾಜಾಪುರೆ ನ್ಯಾಯವಾದಿಗಳಾದ  ವೈ ಕೆ ಕೌಜಲಗಿ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.