ಎಸಿಬಿ ದಾಳಿ; ಸಹಾಯಕ ನಿರ್ದೇಶಕನ ಬಂಧನ

0

ಬೆಂಗಳೂರು, ಫೆ. 5- ಕಾಮಗಾರಿ ಪೂರ್ಣಗೊಂಡಿದ್ದ ಖಾಸಗಿ ಕಟ್ಟಡದ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ರೂ. 20 ಲಕ್ಷ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಬೊಮ್ಮನಳ್ಳಿ ವಲಯದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)/ಶುಕ್ರವಾರ ಬಂಧಿಸಿದೆ.

ಸಿಗ್ಮೀಸ್ ಬ್ರಿವರೀಸ್ ಕಂಪನಿಯ ಘಟಕ ಆರಂಭಕ್ಕಾಗಿ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಖಾಸಗಿ ನಿವೇಶನದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಒ.ಸಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ರೂ 40 ಲಕ್ಷ ಲಂಚ ನೀಡಿದರೆ ಒ.ಸಿ ನೀಡುವುದಾಗಿ ದೇವೇಂದ್ರಪ್ಪ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಿಗ್ಮಿ ಬ್ರೀವರೀಸ್ ವ್ಯವಸ್ಥಾಪಕರು ಎಸಿಬಿಗೆ ದೂರು ನೀಡಿದ್ದರು. ಶುಕ್ರವಾರ 20 ಲಕ್ಷ ಲಂಚ ಪಡೆಯುತ್ತಿದ್ದಾಗ ದೇವೇಂದ್ರಪ್ಪ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ನ್ಯೂಜ್ ೪ ಯು ಸುದ್ದಿವಾಹಿನಿಗೆ ತಿಳಿಸಿದ್ದಾರೆ.