ಕೋವಿಡ್ ಲಸಿಕೆ; ಆಶಾ ಕಾರ್ಯಕರ್ತೆ ಸಾವು ?

0

ಬೆಳಗಾವಿ, ಫೆ. 6- ಕೋವಿಡ್ ಲಸಿಕೆ ಪಡೆದಿದ್ದ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ‌.

ಅವರು ಜನವರಿ 22ರಂದು ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಹಲವು ದಿನಗಳ ನಂತರ ಅಂದರೆ ಅವರಿಗೆ ಜ. 30ರಂದು ಪದೇ ಪದೇ ವಾಂತಿ ಯಾಗಿದೆ. ಬಹಳ ತಲೆನೋವು ಕೂಡ ಬಂದಿತ್ತು. ಚಿಕಿತ್ಸೆಗಾಗಿ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ದ್ದರು.

ಮರುದಿನ ಅವರಿಗೆ ಪಾರ್ಶ್ವವಾಯು ಕೂಡ ಆಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಫೆ.3ರಂದು ಮೃತರಾಗಿದ್ದಾರೆ.

ಮಿದುಳಿನಲ್ಲಿ ರಕ್ತಸಂಚಾರ ಸಮರ್ಪಕವಾಗಿಲ್ಲದ ಕಾರಣ ಅವರು ಮೃತರಾಗಿದ್ದಾರೆ ಎನ್ನುವುದು ವೈದ್ಯಕೀಯ ವರದಿ ಯಿಂದ ತಿಳಿದು ಬಂದಿದೆ’ ಎಂದು ಡಿಎಚ್‌ಒ ಡಾ. ಎಸ್.ವಿ. ಮುನ್ಯಾಳ ಸ್ಪಷ್ಟಪಡಿಸಿದ್ದಾರೆ.

ಅವರಿಗೆ ಪದೇ ಪದೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಕುಟುಂಬದವರು ಕೂಡ ತಿಳಿಸಿದ್ದಾರೆ. ಅವರ ಸಾವು ಕೋವಿಡ್ ಲಸಿಕೆಯಿಂದ ಆಗಿಲ್ಲ ಎಂದು ಇಲಾಖೆಯ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ’ ಎಂದು ಡಿಎಚ್‌ಒ ತಿಳಿಸಿದ್ದಾರೆ.