ಮಸಾಜ್ ಸೆಂಟರ್ ಮೇಲೆ ಪೊಲೀಸರ ದಾಳಿ ಇಬ್ಬರ ಬಂಧನ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

0

ಬೆಳಗಾವಿ ನಗರದ ಟಿಳಕವಾಡಿಯ ಕಾಂಗ್ರೇಸ್ ರೋಡದಲ್ಲಿರುವ ನೆಲಸನ್ ಹೈಟ್ಸ್ ಅಪಾರ್ಟಮೆಂಟದಲ್ಲಿರುವ “ನ್ಯೂ ಗೇಟ್‌ವೇ ಯೂನಿಸೆಕ್ಸ್ ಸ್ಪಾ ಮಸಾಜ್ ಸೆಂಟರ್‌”ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಾಹಿತಿ ಪಡೆದ ಪೋಲೀಸರು ಡಿಸಿಪಿ ವಿಕ್ರಂ ಆಮಟೆ ಮಾರ್ಗದರ್ಶನದಲ್ಲಿ ಸಿಇಎನ್ ಪಿಐ ಗಡ್ಡೆಕರ ಹಾಗೂ ಸಿಬ್ಬಂದಿಗಳು ಸೇರಿಕೊಂಡು ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ,  ಅಲ್ಲಿದ್ದ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

1) ಪ್ರಕಾಶ ಕನ್ನಪ್ಪ ಯಳ್ಳೂರಕರ ವಯಸ್ಸು 27 ವರ್ಷ ಜಾತಿ ಹಿಂದೂ ಕುರಬರ ಸಾ || ಮರಾಠಾ ಕಾಲನಿ ಟಿಳಕವಾಡಿ ಬೆಳಗಾವಿ

2) ವಿನಾಯಕ ಕೇದಾರಿ ಶಿಂಧೆ ವಯಸ್ಸು 37 ವರ್ಷ ಸಾ || ಮರಗಾಯಿ ಗಲ್ಲಿ  ಜುನ್ನೆ ಬೆಳಗಾವಿ ಇಬ್ಬರು ಬಂಧಿತ ಆರೋಪಿಗಳು.

 

ಇದೇ ವೇಳೆ ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತ ಮಾಡಿದ್ದಾರೆ. ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ : 03/2021 ರಲ್ಲಿ ಪ್ರಕರಣ ದಾಖಲಲಾಗಿದ್ದು, ಹೆಚ್ಚಿನ ತನಿಖೆ ಕೈಕೊಂಡಿದ್ದಾಗಿ ಡಿಸಿಪಿ ವಿಕ್ರಂ ಆಮಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿರುವ ಎಲ್ಲಾ ಸ್ಪಾ ಸೆಂಟರ್ ಗಳಿಗೆ ಕಡ್ಡಾಯವಾಗಿ ಪರವಾಣಿಗೆ ಪತ್ರ ಹಾಗೂ ಸಿಸಿಟಿವ್ಹಿ ಅಳವಡಿಸಬೇಕು. ಸ್ವಾ ಗಳಲ್ಲಿನ ಸಿಬ್ಬಂದಿಗಳ ಬಗ್ಗೆ ದಾಖಲೆಗಳನ್ನು ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸ್ವಾ ಗಳ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುವಂತಿಲ್ಲ. ಇಂತಹ ಅನೈತಿಕ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಎಚ್ಚರಿಕೆ ನೀಡಿದ್ದಾರೆ.