ಟ್ರಕ್ ಚಾಲಕ ಗೋವಿಂದು ಅವರ ಮೇಲೆ ಮಹಾರಾಷ್ಟ್ರದ ಸಾತಾರಾ ಟೋಲ್ ಬಳಿ ಘಟನೆ ಅಶೋಕ್ ಚಂದ್ರಗಿ ಹತ್ತಿರ ಮಹಿತಿ

0

ತುಮಕೂರು ಜಿಲ್ಲೆಯ ಶಿರಾ ಮೂಲದ ಟ್ರಕ್ ಚಾಲಕ ಗೋವಿಂದು ಅವರ ಮೇಲೆ ಮಹಾರಾಷ್ಟ್ರದ ಸಾತಾರಾ ಟೋಲ್ ಬಳಿ ನಿನ್ನೆ ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಹಲ್ಲೆ ನಡೆಸಲಾಗಿದೆ.

ಆರು ಜನರ ಗುಂಪು ನಡೆಸಿದ ಹಲ್ಲೆಯಿಂದಾಗಿ
ಚಾಲಕ ವಾಂತಿಯಾಗಿದೆ.

ಬೆಳಗಾವಿ ಜಿಲ್ಲಾ ಎಸ್.ಪಿ.ಶ್ರೀ ನಿಂಬರಗಿ ಅವರು ಅಥಣಿ ಡಿ ಎಸ್ ಪಿ ಅವರಿಗೆ ತನಿಖೆಗೆ ಸೂಚನೆ ನೀಡಿದ್ದರು.ಅವರು ಕೈಕೊಂಡ ಕ್ರಮದಿಂದಾಗಿ ಚಾಲಕ ಘಟನಾ ಸ್ಥಳದಿಂದ ಪಾರಾಗಿ ಇಂದು ಶನಿವಾರ ಮುಂಜಾನೆ ಕೊಲ್ಹಾಪುರ ತಲುಪಿದ್ದಾನೆ.

ಇಂದು ಮುಂಜಾನೆ 8.15 ಕ್ಕೆ ನನ್ನೊಂದಿಗೆ ಫೋನಿನಲ್ಲಿ ಘಟನೆಯ ಬಗ್ಗೆ ವಿವರಿಸಿದ್ದಾನೆ.ಪೋಲೀಸರಿಗೆ ದೂರು ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅವನೊಂದಿಗೆ ನಾನು ಮಾತನಾಡಿದ ಧ್ವನಿ ಮುದ್ರಣ ಇಲ್ಲಿದೆ.

ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ ಮೊ:9620114466
ದಿ.6.2.2021