ಬೈಲಹೊಂಗಲ ಪೋಲಿಸ್ ಠಾಣೆ ವತಿಯಿಂದ ಚಿಕ್ಕಬಾಗೇವಾಡಿ ಯಲ್ಲಿ ಜನಸಂಪರ್ಕ ಸಭೆ.

0

 

ಬೈಲಹೊಂಗಲ:ಚಿಕ್ಕಬಾಗೇವಾಡಿ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಬೈಲಹೊಂಗಲ ಪೋಲಿಸ್ ಠಾಣೆ ಯಿಂದ ಜನಸಂಪರ್ಕ ಸಭೆ ಕಾರ್ಯಕ್ರಮ ನಡೆಸಿ ಮಾತನಾಡಿದ ಪಿ.ಎಸ್. ಐ. ಈರಪ್ಪ ರಿತ್ತಿ
ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲವೇ ಮೊಬೈಲ್​​ಗಳಿಗೆ ಕರೆ ಮಾಡಿ ಒಟಿಪಿ ಪಡೆದು ವಂಚಿಸುವವರ ಸಂಖ್ಯೆ ಹೆಚ್ಚಾಗಿದ್ದು, ಜನರು ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ತಮ್ಮ ವೈಯಕ್ತಿಕ ಮಾಹಿತಿ, ಎಟಿಎಂ ಪಿನ್ ಮುಂತಾದವನ್ನು ಹೇಳಬಾರದು. ಮಕ್ಕಳು ಮೊಬೈಲ್ ಬಳಸುವಾಗ ಎಚ್ಚರ ವಹಿಸಿ, ಖಾಸಗಿ ವೆಬ್ ತಾಣಗಳನ್ನು ತೆರೆಯದಂತೆ ಸೂಚನೆ ನೀಡಬೇಕು. ಅಲ್ಲದೆ ಗಣ್ಯರ ಇಲ್ಲವೇ ಇತರರ ತೇಜೋವಧೆ ಮಾಡುವಂತಹ ಪೋಸ್ಟ್​​​ಗಳನ್ನು ಹಾಕುವವರ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದ್ದು, ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಮೀನಿನ ದಾಖಲೆಗಳು ನಮ್ಮಲ್ಲಿ ಇರುವುದಿಲ್ಲ. ಆದರೆ ಕ್ರಿಮಿನಲ್ ಅತಿಕ್ರಮಣ ಆಗಿ ಕಂದಾಯ ಇಲಾಖೆಯವರು ಸೂಚನೆ ನೀಡಿದ ನಂತರವೇ ಪ್ರಕರಣ ದಾಖಲಿಸಿಕೊಳ್ಳಬಹುದು. ನ್ಯಾಯಾಲಯದ ಸೂಚನೆ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಕೇವಲ ಭೂ ದಾಖಲೆ ಇಟ್ಟುಕೊಂಡು ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ. ಭೂ ವ್ಯಾಜ್ಯಗಳಲ್ಲಿ ಪೊಲೀಸ್ ದೂರು ನೀಡಿದ ತಕ್ಷಣ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಈ ವಿಷಯವನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಭೂ ವ್ಯಾಜ್ಯಗಳ ಕುರಿತು ಮಾಹಿತಿ ನೀಡಿದರು.

ಮನೆಯಲ್ಲಿ ಚಿನ್ನಾಭರಣ ಜಾಸ್ತಿಯಿದ್ದರೆ ಹೊರ ಊರಿಗೆ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಬೀಟ್ ಪೊಲೀಸರು ನಿಗಾ ವಹಿಸಲು ಅನುಕೂಲವಾಗುತ್ತದೆ. ಹಾಗೆಯೇ ಕೊರೊನಾ ಸೋಂಕು ಇರುವುದರಿಂದ ಸಾರ್ವಜನಿಕ ಉತ್ಸವ ಇನ್ನಿತರ ಆಚರಣೆ ಬಗ್ಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ರಸ್ತೆ ಅಪಘಾತಗಳಿಂದ ವರ್ಷಕ್ಕೆ ಸಾಕಷ್ಟು ಸಾವುಗಳಾಗುತ್ತಿವೆ. ಇದರಲ್ಲಿ ಹೆಚ್ಚಿನವು ಹೆಲ್ಮೆಟ್ ಧರಿಸದ ಪ್ರಕರಣಗಳಾಗಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಹಾಗೂ ಎಲ್ಲಾ ವಾಹನ ಹೂಂದಿದವರು ಆರ್ ಸಿ ಬುಕ್ಕ್, ಹಾಗೂ ವಾಹನಗಳಿಗೆ ಸಂಬಂಧ ಪಟ್ಟ ದಾಖಲಾತಿಗಳನ್ನು ಹೂಂದಿರಬೇಕು ಎಂದು ಸೂಚನೆ ನೀಡಿದರು. ಇನ್ನೂ ಹಲವಾರು ಪೋಲಿಸ್ ಕಾನೂನುಗಳ ಬಗ್ಗೆ ಮಾಹಿತಿ ಕೊಟ್ಟರು.

ಈ ವೇಳೆ ಬೈಲಹೊಂಗಲ ಪೋಲಿಸ್ ಠಾಣೆ ಸಿಬ್ಬಂದಿಗಳಾದ ಸೋಮು ಕರವೇನವರ,ಕೆ ಜಿ ಹಳ್ಳದಮನಿ,ಎಸ್ ಯು ಮಣಸಿನಕಾಯಿ.
ಗ್ರಾಪಂ ಅಧ್ಯಕ್ಷ ಬಸವರಾಜ ಗಡೆನ್ನವರ, ಗ್ರಾಪಂ ಉಪಾಧ್ಯಕ್ಷ ಶೀವಲಿಂಗವ್ವ ದೊಡ್ಡಕುರಬರ
ಸದಸ್ಯರಾದ ಶಿವಾನಂದ ಪೊಜೇರ,ಚಂದ್ರಗೌಡ ಪಾಟೀಲ, ಮಹೇಶ ಗುಂಡ್ಲುರ,ರವಿ ಇಟಗಿ,ಸೋಮಪ್ಪ ಕುರಬರ, ನಿರ್ಮಲಾ ಹೋಳಿ, ಅಂಬರೀಷ್ ಸೊಗಲನ್ನವರ, ಶಿವಣಪ್ಪ ಚಂದರಗಿ ,ಅಡೀವೆಪ್ಪ ವಿಭೂತಿ, ಗ್ರಾಮದ ಮುಖಂಡರಾದ ರವಿ ಪಾರಿಶ್ವಾಡ,
ಎಂ.ಎಸ್ ಪಾಟೇಲ,ಆನಂದ ಹಂಪನ್ನವರ,ಶಿವಾನಂದ ಉಣಕಲ್ಲ, ಕಲ್ಲಪ್ಪ ಸೊಗಲನ್ನವರ, ರುದ್ರಯ್ಯಾ ಹಿರೇಮಠ,ಬಸವರಾಜ ಅಂಗಡಿ ಯಲ್ಲಪ್ಪ ಕುರಬರ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.