ವಿದ್ಯುತ್ ಶಾರ್ಟ ಸಕ್ರ್ಯೂಟನಿಂದ ಕಬ್ಬು ಬೆಂಕಿಗೆ ಆಹುತಿ, 8 ಎಕರೆ ಕಬ್ಬು ಸುಟ್ಟು ಅಪಾರ ಪ್ರಮಾಣದ ಹಾನಿ

0

ಚನ್ನಮ್ಮನ ಕಿತ್ತೂರು: ವಿದ್ಯುತ್ ಶಾರ್ಟ ಸಕ್ರ್ಯೂಟನಿಂದ ಕಬ್ಬು ಬೆಂಕಿಗೆ ಆಹುತಿ, 8 ಎಕರೆ ಕಬ್ಬು ಸುಟ್ಟು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ
ಸಮೀಪದ ಹೊಳಿ ನಾಗಲಾಪೂರ ಹದ್ದಿನಲ್ಲಿರುವ ಗಡುದೂರು ಗ್ರಾಮದ ರೈತರಾದ ಈರಪ್ಪ ಚನ್ನಣ್ಣವರ ಮತ್ತು ಸುರೇಶ ಚನ್ನಣ್ಣವರ ಇವರ 112/4 ಮತ್ತು 112/2 ಸರ್ವೆ ನಂಬರಿನ 8-06 ಎಕರೆ ಹೊಲವನ್ನು ಸಂಗಮೇಶ ಗೌಡಪ್ಪ ಚನ್ನಣ್ಣವರ ಪಾಲಿನಿಂದ ಮಾಡಿದ ಕಬ್ಬಿನ ಬೆಳೆಗೆ ವಿದ್ಯುತ್ ಸ್ಪರ್ಶದಿಂದ ಬೆಂಕಿ ಬಿದ್ದು ಸುಮಾರು 380 ಟನ್ನ ಕಬ್ಬು ಹಾಗೂ 30 ಸ್ಪಿಂಕಲರ್ ಪೈಪುಗಳು ಸುಟ್ಟು ಕರಕಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ ಬಂದು ನಾವೆಲ್ಲ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಒಂದೆ ಹೊತ್ತು ಊಟ ಮಾಡಿ ಕಾಲವನ್ನು ಕಳೆದಿದ್ದೇವೆ. ವರ್ಷಪೂರ್ತಿ ಹಗಲು ರಾತ್ರಿ ದುಡಿದು ಸಾಲಸೂಲ ಮಾಡಿ ಬೆಳೆಸಿದ 8 ಎಕರೆ ಕಬ್ಬು ಇಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಎಂದು ರೈತ ಸಂಗಮೇಶ ವರದಿಗಾರರ ಮುಂದೆ ತನ್ನ ಅಳಲನ್ನು ತೋಡಿಕೊಂಡು ಸುಟ್ಟ ಕಬ್ಬನ್ನು ಸಂಬಂಧ ಪಟ್ಟ ಕಾರ್ಖಾನೆಯವರು ಬಹು ಬೇಗನೆ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ.