ಬೆಳಗಾವಿ ನಿವಾಸಿಯೊಬ್ಬರಿಗೆ ವಸ್ತುಗಳ ಸಮೇತ ಬ್ಯಾಗ್ ತಲುಪಿಸಿ ಬೆಳಗಾವಿ ರೈಲ್ವೆ ಪೊಲೀಸರು ಕರ್ತವ್ಯ ಮೆರೆದಿದ್ದಾರೆ.

0

ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಬ್ಯಾಗ್ ನ್ನು ಮರೆತು ರೈಲು ಇಳಿದಿದ್ದ ಬೆಳಗಾವಿ ನಿವಾಸಿಯೊಬ್ಬರಿಗೆ ವಸ್ತುಗಳ ಸಮೇತ ಬ್ಯಾಗ್ ತಲುಪಿಸಿ ಬೆಳಗಾವಿ ರೈಲ್ವೆ ಪೊಲೀಸರು ಕರ್ತವ್ಯ ಮೆರೆದಿದ್ದಾರೆ.

ಮೈಸೂರು-ಅಜ್ಮೀರ್ ಟ್ರೇನ್‍ನಲ್ಲಿ ಫೆ.5ರಂದು ಬೆಳಗಾವಿಗೆ ಬಂದಿಳಿದಿದ್ದ ನಗರದ ಕ್ಯಾಂಪ್ ಪ್ರದೇಶದ ಅಯೂಬ್ ಚೌಧರಿ ಎಂಬುವವರು 2 ಲಕ್ಷ 9 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಎರಡು ಬ್ಯಾಗ್‍ಗಳನ್ನು ಟ್ರೇನ್‍ನಲ್ಲಿ ಬಿಟ್ಟಿದ್ದರು. ಈ ಸಂಬಂಧ ರೈಲ್ವೇ ಪೊಲೀಸರಿಗೆ ಅಯೂಬ್ ಚೌಧರಿ ದೂರು ನೀಡಿದ್ದರು.

ಎರಡೂ ಬ್ಯಾಗ್‍ಗಳನ್ನು ಪತ್ತೆ ಹಚ್ಚುವಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದು, ರವಿವಾರ ಅಯೂಬ್ ಚೌಧರಿಗೆ ರೈಲ್ವೇ ಪಿಎಸ್‍ಐ ಸತ್ಯಪ್ಪ ಎಮ್, ಎಎಸ್‍ಐ ನಟರಾಜ್ ಟಿ, ಸಿಬ್ಬಂದಿಗಳಾದ ಹಣಮಂತ ಸಪ್ತಸಾಗರ, ಸುರೇಂದ್ರ ವಿಭೂತಿ ಹಾಗೂ ಮಲ್ಲಿಕ್ ಮುಲ್ಲಾ ಅವರು ಬ್ಯಾಗ್‍ಗಳನ್ನು ಮರಳಿಸಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.