ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ನರಶಸ್ತ್ರಚಿಕಿತ್ಸಾ ಕೊಠಡಿಯನ್ನು ಜನಸೇವೆಗೆ ಅರ್ಪಿಸಿದರು.

0

ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ನರಶಸ್ತ್ರಚಿಕಿತ್ಸಾ ಕೊಠಡಿಯನ್ನು ಯುನಿಯನ್ ಬ್ಯಾಂಕನ ಕಾರ್ಯಕಾರಿ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ರಾಜಕಿರಣ ರಾಯ್ ಜಿ ಅವರಿಂದಿಲ್ಲಿ(ಸೋಮವಾರ ದಿ. 8 ಫೆಬ್ರುವರಿ 2021) ಜನಸೇವೆಗೆ ಅರ್ಪಿಸಿದರು.
ಶಸ್ತ್ರಚಿಕಿತ್ಸಾ ಕೊಠಡಿಯನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದ ಅವರು, ರಾಷ್ಟ್ರವು ಪ್ರಗತಿಫಥದಲ್ಲಿ ಸಾಗಬೇಕಾದರೆ ಮೂಲಭೂತ ಸೌಲಭ್ಯಗಳು ಸದಾ ಉನ್ನತೀಕರಣದ ಹಾದಿಯಲ್ಲಿ ಸಾಗಬೇಕಾಗಿದೆ. ರಾಷ್ಟ್ರದ ಬೇಳವಣಿಗೆಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತಿದ್ದು, ವಾಣಿಜ್ಯಾತ್ಮಕವಾಗಿ ಅಭಿವೃದ್ದಿಗೆ ಸಹಕಾರಿಯಾಗಲಿವೆ. ಕೋವಿಡ್ ಸಮಯದಲ್ಲಿ ಆರೋಗ್ಯ ಸೇವೆಯ ಕಾರ್ಯ ಅತ್ಯಂತ ಶ್ಲಾಘನೀಯ ವಿಶ್ವವೇ ಸ್ಥಬ್ದಗೊಂಡರೂ ಸಹ ಆರೋಗ್ಯ ಕಾರ್ಯಕರ್ತರ ಸೇವೆಗೆ ಬಿಡುವಿರಲಿಲ್ಲ. ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು ದೇಶದ ಅಭಿವೃದ್ದಿಗೆ ಪರಿಣಾಮಕಾರಿಯಾದ ಕೊಡುಗೆ ನೀಡುತ್ತಲಿವೆ, ಅದರಂತೆ ಆರೋಗ್ಯ ಕ್ಷೇತರ್ವೂ ಕೂಡ ದೇಶದ ಸಾಮಾಜಿಕ ಆರೋಗ್ಯ ಕಾಪಾಡುತ್ತ ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ತೊಡಗಿಕೊಂಡಿವೆ ಎಂದು ತಿಳಿಸಿದರು.
ಡಿಜಿಟಲ್ ಮಾಧ್ಯಮ ಇಂದು ಎಲ್ಲ ಕ್ಷೇತ್ರದಲ್ಲಿಯೂ ಹಾಸುಹೊಕ್ಕಿದ್ದು, ಆ ಮಾದ್ಯಮದ ಮೂಲಕ ದುರ್ಗಮ ಪ್ರದೇಶದ ಜನರಿಗೂ ಕೂಡ ಆರೋಗ್ಯ ಸೇವೆಯನ್ನು ಕಲ್ಪಿಸಲು ಆರೋಗ್ಯ ಸಂಸ್ಥೆಗಳು ಪರಿಣಾಮಕಾರಿಯಾದ ಯೋಜನೆಗಳನ್ನು ರೂಪಿಸಬೇಕು. ಅದರಂತೆ ಆರೋಗ್ಯ ಪ್ರವಾಸೋದ್ಯಮಕ್ಕೆ ಭಾರತದಲ್ಲಿ ಒಳ್ಳೆಯ ಅವಕಾಶಗಳಿದ್ದು, ಅಭಿವೃದ್ದಿಶೀಲ ರಾಷ್ಟ್ರಗಳ ಜನರಿಗೆ ವೈದ್ಯಕೀಯ ಸೇವೆಯನ್ನು ಕಲ್ಪಿಸಲು ಆಕರ್ಷಕ ಸೇವೆ ಹಾಗೂ ಸೌಲಭ್ಯಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಕೆಎಲ್‍ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಕಳೆದ 20 ವರ್ಷದ ಹಿಂದೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಾಗಿ ಈ ಭಾಗದ ಜನತೆ ಮಹಾರಷ್ಟ್ರದ ಮಿರಜ, ಮುಂಬೈ ಅಥವಾ ಬೆಂಗಳೂರನ್ನು ಆಶ್ರಯಿಸಬೇಕಾಗಿತ್ತು. ಆದರೆ 15 ವರ್ಷದಿಂದ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯ, ನರರೋಗ, ನರಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ವೈದ್ಯಕೀಯ ಸೇವೆಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ ವಿ ಎಸ್ ಸಾಧುನವರ, ಡಾ. ವಿ ಐ ಪಾಟೀಲ, ಅಮಿತ ಕೋರೆ, ಡಾ. ಆರ್ ಬಿ ನೇರ್ಲಿ, ಕಾಹೇರನ ಕುಲಪತಿ ಡಾ. ವಿವೇಕ ಸಾವೋಜಿ, ಡಾ. ಹೆಚ್ ಬಿ ರಾಜಶೇಖರ, ಡಾ. ವಿ ಡಿ ಪಾಟೀಲ, ಡಾ. ಎ ಎಸ್ ಗೋಗಟೆ, ಡಾ. ರಾಜೇಶ ಪವಾರ, ಡಾ. ವಿ ಎಮ್ ಪಟ್ಟಣಶೆಟ್ಟಿ, ಡಾ. ಪ್ರಕಾಶ ಮಹಾಂತಶೆಟ್ಟಿ, ಡಾ. ರಾಜೇಶ ಶೆಣೈ, ಡಾ. ಅಭಿಷೇಕ ಪಾಟೀಲ, ಡಾ. ವಿಕ್ರಮ, ಡಾ. ಪ್ರಕಾಶ ರಾಥೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.