ಯುವತಿಗೆ ಬೆಂಕಿ ಇಟ್ಟು ಆತನೇ ಸುಟ್ಟು ಹೋದ!!

0

ಯುವತಿ ಗಂಭೀರ!

ಮುಂಬೈ:  ಪಾಗಲ್ ಪ್ರೇಮಿಯೊಬ್ಬ ಪ್ರೀತಿಯನ್ನು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮುಂಬೈ ನಗರದಲ್ಲಿ ನಡೆದಿದ್ದು, ವಿಧಿಯಾಟ ಎಂದ್ರೆ ಯುವತಿಗೆ ಹಚ್ಚಿದ ಬೆಂಕಿಯಲ್ಲಿ ಆತನೂ ಬೆಂದು ಹೋಗಿದ್ದಾನೆ.

ಮುಂಬೈನ ಮೇಘವಾಡಿ ಪ್ರದೇಶದಲ್ಲಿ ವಾಸುತ್ತಿದ್ದ ಯುವತಿ ಹಾಗೂ  ಯುವಕ ಎರಡೂವರೆ ವರ್ಷಗಳಿಂದ  ಸ್ನೇಹತರಾಗಿದ್ದರು.   ಆತ ಮಾತ್ರ ಅದನ್ನು ಪ್ರೀತಿಯಾಗಿ ಪರಿಗಣಿಸಿದ್ದನಂತೆ. ನಿಮ್ಮ ಮಗಳನ್ನು ನನಗೇ ಮದುವೆ ಮಾಡಿಕೊಡಿ ಎಂದು ಆಕೆಯ ಮನೆಗೆ ಬಂದು ಕೇಳಿದ್ದನಂತೆ. ಆದರೆ ಯುವತಿಯ ತಂದೆ ತಾಯಿ ಅದಕ್ಕೆ ಒಪ್ಪಿಲ್ಲ.

ಇದರಿಂದ ಕೋಪಗೊಂಡ ಆತ ಫೆ.  6ರಂದು ಯುವತಿ ಮನೆಗೆ ನುಗ್ಗಿ,  ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿ ಉರಿಯುವುದನ್ನು ಕಂಡು ಭಯಭೀತಳಾದ ಯುವತಿ ತಕ್ಷಣ ಬೆಂಕಿ ಹಚ್ಚಿದ್ದ ಯುವಕನನ್ನೂ ಅಪ್ಪಿಕೊಂಡಿದ್ದಾಳೆ. ಆತನ ದೇಹಕ್ಕೂ ಬೆಂಕಿ ಹತ್ತಿ ಉರಿಯಲಾರಂಭಿಸಿದೆ.

ಮನೆಯಲ್ಲಿ ಕೂಗಾಟ ಕೇಳಿದ ನಂತರ ಅಕ್ಕ ಪಕ್ಕದ ಮನೆಯವರು ಒಳಗೆ ಬಂದು ನೋಡಿದ್ದಾರೆ. ಎರಡು ದೇಹಗಳು ಬೆಂಕಿಯಲ್ಲಿ ನರಳಾಡುತ್ತಿರುವುದನ್ನು ಕಂಡು ತಕ್ಷಣ ಬೆಂಕಿ ನಂದಿಸಿ, ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಯುವಕ ಸಾವನ್ನಪ್ಪಿದ್ದಾನೆ.

ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.