ನಗರದ ಹಲವೆಡೆ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ:

0

ಬೆಳಗಾವಿ 09 : ಮಂಗಳವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಿಂದ ಮಹಾನಗರ ಪಾಲಿಕೆಯ ಅನುದಾದಡಿಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆ ಸುಧರಣಾ, ಒಳ ಚರಂಡಿ ನಿರ್ಮಾಣ ಹಾಗೂ ಯು.ಜಿ.ಡಿ ಪೈಪಲೈನ ಅಳವಡಿಕೆ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆಯ ಅನುದಾನದಡಿಯಲ್ಲಿನ ಒಟ್ಟು ರೂ. 60.00 ಲಕ್ಷಗಳಲ್ಲಿ ನಗರದ ಮರಾಠಾ ಮಂಡಳ ವೃತ್ತದಿಂದ ವೀರಭದ್ರ ನಗರದ ವರೆಗೆ ರಸ್ತೆ ಸುಧಾರಣೆ, ರೈಲ ನಗರ ಮತ್ತು ಸದಾಸಿವ ನಗರದಲ್ಲಿ ರಸ್ತೆ ಹಾಗೂ

ಒಳ ಚರಂಡಿ ಸುಧಾರಣೆ ಅದೇ ರೀತಿಯಾಗಿ ವೀರಭದ್ರನಗರದ 7ನೇ ಮುಖ್ಯ ಮತ್ತು 1ನೇ ಅಡ್ಡ ರಸ್ತೆಯನ್ನು ಸುಧಾರಣಾ ಮಾಡುವುದು, ಅಕ್ಕನ ಮಾರ್ಗ ಶ್ರೀನಗರ ಡಬಲ್ ರೋಡನಿಂದ ಪೂಜಾರಿ ಮನೆಯ ಸೆಕ್ಟರ ನಂ. 11 ಮತ್ತು 12 ರವರೆಗೆ ಯು.ಜಿ.ಡಿ ಪೈಪಲೈನ ಕಾಮಗಾರಿಗೆ ಪೂಜೆಯನ್ನು ಸಲ್ಲಿಸಲಾಗಿದೆ ಎಂದು

ಮಾಹಿತಿಯನ್ನು ನೀಡಿದ ಅವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸದಾಸಿವ ನಗರ, ರೈಲ ನಗರ, ವೀರಭದ್ರ ನಗರದ ಸ್ಥಳಿಯರು, ಕಾರ್ಯಕರ್ತರು, ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಮಹೇಶ ನರಸನ್ನವರ ಎಇಇ, ಸಚಿನ ಕಾಂಬಳೆ ಎಇಇ, ಕಿರಿಯ ಅಭಿಯಂತರರಾದ ಯಲ್ಲಪ್ಪ ಹಾಗೂ ಸರೋಜಿನಿ ಬೆಣ್ಣಿ, ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.