ಜಾನಪದವು ಭಾರತೀಯ ಸಂಸ್ಕøತಿಯ ಮೂಲ ತಳಹದಿ : ಎಲ್.ಎಸ್. ಶಾಸ್ತ್ರೀ

0

ಜಾನಪದವು ಭಾರತೀಯ ಸಂಸ್ಕøತಿಯ ಮೂಲ ತಳಹದಿ : ಎಲ್.ಎಸ್. ಶಾಸ್ತ್ರೀ

ಬೆಳಗಾವಿ: ಜಾನಪದವು ನಮ್ಮ ಭಾರತೀಯ ಸಂಸ್ಕøತಿಯ ಮೂಲ ತಳಹದಿಯಾಗಿದೆ. ಜಾನಪದ ಇಲ್ಲದೇ ಇರುವಂತಹ ರಾಷ್ಟ್ರ ಇಡೀ ವಿಶ್ವದಲ್ಲಿ ಯಾವುದೂ ಇಲ್ಲವೇ ಇಲ್ಲ. ಎಲ್ಲ ದೇಶ ಪ್ರಾಂತಗಳಲ್ಲಿ ತನ್ನದೇಯಾದ ಜಾನಪದವನ್ನು ಕಾಣಬಹುದು ಎಂದು ಹಿರಿಯ ಪತ್ರಕರ್ತರು, ಸಾಹಿತಿ ಎಲ್. ಎಸ್. ಶಾಸ್ತ್ರೀ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಪೃಥ್ವಿ ಪೌಂಡೇಶನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಹಿರಿಯ ಸಾಹಿತಿ ಎಲ್‍ಎಸ್. ಶಾಸ್ತ್ರೀ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸ್ತ್ರ ಅವರು, ಜನಪದ ಎನ್ನುವ ಶಬ್ದಕ್ಕೆ ಬಹಳ ದೊಡ್ಡ ವ್ಯಾಪ್ತಿಯಿದೆ. ಅದು ವಿಶ್ವವ್ಯಾಪಿ ಎಂದರೂ ಕೂಡ ತಪ್ಪಿಲ್ಲ. ಯಾಕೆಂದರೆ ಜಗತ್ತಿನ ಯಾವುದೇ ರಾಷ್ಟ್ರ ನೋಡಿದ್ರೂ ಕೂಡ ಅಲ್ಲಿ ಒಂದು ಜನಪದ ಸಂಸ್ಕøತಿ ಇದ್ದೇ ಇರುತ್ತದೆ.

ಜನಪದ ಎಂದರೆ ಜನಜೀವನ, ಜನರ ಸಂಸ್ಕøತಿ ನಡೆ ನುಡಿ ಪರಂಪರೆ ಇತ್ಯಾದಿ ಎಲ್ಲಾ ಸೇರಿ ಜನಪದ ಆಗಿರುತ್ತದೆ. ಅದರಿಂದ ಹುಟ್ಟುವುದೇ ಕಲೆ, ಸಾಹಿತ್ಯ ಇತ್ಯಾದಿಯಾಗಿದೆ ಎಂದು ಜಾನಪದ ಮಹತ್ವವನ್ನು ತಿಳಿಸಿದರು.
ಬಳಿಕ ಎಲ್.ಎಸ್.ಶಾಸ್ತ್ರೀ ಅವರನ್ನು ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರು ಸತ್ಕರಿಸಿ, ಗೌರಿವಿಸಿದರು. ನಂತರ ನಡೆದ ಮಾಧುರಿ ತಂಡದಿಂದ ಜಾನಪದ ಗಾಯನ ಹಾಗೂ ಮಯೂರಿ ತಂಡದಿಂದ ಜಾನಪದ ಗಾಯನ ಹಾಗೂ ಮಯೂರಿ ತಂಡದಿಂದ ಜಾನಪದ ನೃತ್ಯ ಎಲ್ಲರ ಮನಸೂರೆಗೊಳಿಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೃಥ್ವಿ ಫೌಂಡೇಶನ್ ಅಧ್ಯಕ್ಷರಾದ ಡಾ. ಹೇಮಾವತಿ ಸೊನೊಳ್ಳಿ ವಹಿಸಿದ್ದರು.

ಇಂದಿನ ಈ ಕಾರ್ಯಕ್ರಮದಲ್ಲಿ ಫೌಂಡೇಶನ್‍ನ ಉಪಾಧ್ಯಕ್ಷೆ ಮಹಾದೇವಿ ಹಿರೇಮಠ, ಕಾರ್ಯದರ್ಶಿ ಶೈಲಜಾ ಹಿರೇಮಠ, ಪದಾಧಿಕಾರಿಗಳಾದ ಭುವನೇಶ್ವರಿ ಪೂಜೇರಿ, ಗಿರಿಜಾ ಹಟ್ಟಿಹೊಳಿ, ರಶ್ಮಿ ಪಾಟೀಲ್, ಪಾರ್ವತಿ ಪಾಟೇಲ್, ಆಶಾ ಕಡಪಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.