ಕಾಕತಿ ಸಿ ಪಿ ಐ ರಾಘವೇಂದ್ರ ಹಳ್ಳೂರು ನೇತೃತ್ವದ ತಂಡದಿಂದ ಮಟ್ಕಾ ದಾಳಿ ರೂ. 6880 ನಗದು ಜಪ್ತ್

0

ಬೆಳಗಾವಿ :  ಕಾಕತಿ ಸಿ ಪಿ ಐ ರಾಘವೇಂದ್ರ ಹಳ್ಳೂರು ನೇತೃತ್ವದ ತಂಡದಿಂದ ಮಟ್ಕಾ ದಾಳಿ ರೂ. 6880 ನಗದು ಜಪ್ತ್

ಕಾಕತಿ  ಪೋಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ
ಚಿಕನ್ ಅಂಗಡಿಯಲ್ಲಿ ಮಟಕಾ ನಡೆಸುತ್ತಿದ್ದವನನ್ನು ಬಂಧಿಸಿದ್ದಾರೆ.


ಕಾಕತಿ ವ್ಯಾಪ್ತಿಯಲ್ಲಿ  ಕಳ್ಳಿಯಂತೆ ನಡೆಸುತ್ತಿರುವ ಮಟಕಾ ಧಂಧೆಕೋರರನ್ನು  ಹಿಡಿಯುವಲ್ಲಿ    ಕಾಕತಿ ಸಿ ಪಿ ಐ ರಾಘವೇಂದ್ರ ಹಳ್ಳೂರು ನೇತೃತ್ವದ  ತಂಡ  ಯಶಸ್ವಿಯಾಗಿದೆ

ಹೊನಗಾದಲ್ಲಿ ಹೆಸರಿಗೆ ಚಿಕನ್ ಅಂಗಡಿ ಹಾಕಿಕೊಂಡು ಇತ್ತಿಚಿಗಷ್ಟೇ ಮಟಕಾ ದಂಧೆ ನಡೆಸಲು ಆರಂಭಿಸಿರುವ ಆರೋಪಿ ಸೋಯಲ್ ಮೆಹಬೂಬ್ ಶೇಖ್ ವಯಸ್ಸು 27 ಸಾ:ಹೊನಗಾ ಇತನನ್ನು ಹೊನಗಾ ಗ್ರಾಮದಲ್ಲಿ   ಸಿ ಪಿ ಐ ರಾಘವೇಂದ್ರ ಹಳ್ಳೂರು ರವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದು ಇನ್ನು ಇಂತಹಾ ದಂಧೆಕೋರರನ್ನು  ಕಾಕತಿ ಪೊಲೀಸರು  ಹಿಡಿಯಲು ಬಲೆ ಬೀಸಿದ್ದಾರೆ.

ಇಂದು ಬಂದಿಸಿದ ಆರೋಪಿಯಿಂದ ರೂ 6880/-ನಗದು ಹಣ, ಮೊಬೈಲ್ ಮತ್ತು ಮಟಕಾ ಚೀಟಿಗಳೊಂದಿಗೆ ಇಂದು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು

ಕಾಕತಿ ಸಿಪಿಐ ರಾಘವೇಂದ್ರ ಹಳ್ಳೂರ್ ನೇತೃತ್ವದ ತಂಡ ಹಾಗೂ ಸಿಬ್ಬಂದಿವರ್ಗದವರಿಗೆ ಪೊಲೀಸ್ ಕಮಿಷನರ್ ರವರು ಶ್ಲಾಘಿಸಿದ್ದಾರೆ