ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ರಾಷ್ಟ್ರಮಟ್ಟದಲ್ಲಿ ಸಾಧನೆ

0

ಬೆಳಗಾವಿ ; ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ(ಸ್ವಾಯತ್ತ) ಮಹಾವಿದ್ಯಾಲಯವು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮುಂದುವರೆಸಿದೆ. ಮಹಾವಿದ್ಯಾಲಯದ ಬಿ.ಸಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ಕೆಡೆಟ್ ಸಮರ್ಥ ಘಾಟಗೆ ದಿನಾಂಕ 17-12-2020 ರಿಂದ 29-01-2021 ರ ವರೆಗೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ವಿಭಾಗದ ಪ್ರತಿನಿಧಿಯಾಗಿ ಭಾಗವಹಿಸಿದ್ದಲ್ಲದೆ ಪಿಎಮ್ ರ್ಯಾಲಿಯ ಪರೇಡ್ ಕಮಾಂಡರ್ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾನೆ.

ಮಹಾವಿದ್ಯಾಲಯ ಹಾಗೂ ಎನ್‍ಸಿಸಿ ವಿಭಾಗದ ವತಿಯಿಂದ ಕೆಡೆಟ್ ಸಮರ್ಥ ಘಾಟಗೆ ಅವರನ್ನು ತುಂಬು ಹೃದಯದಿಂದ ಸನ್ಮಾನಿಸಲಾಯಿತು.

ಭಾವಚಿತ್ರದಲ್ಲಿ : ಪ್ರಾಚಾರ್ಯರಾದ ಡಾ.(ಶ್ರೀಮತಿ) ಜೆ. ಎಸ್. ಕವಳೇಕರ, ಶ್ರೀಮತಿ. ಶೀಲಾ ಮೆನ್ಸೆ, ಪದವಿ ಪೂರ್ವ ಪ್ರಾಚಾರ್ಯರಾದ ಪ್ರೊ.ಎಸ್.ಜಿ. ನಂಜಪ್ಪನವರ ಅವರು, ಲೆಪ್ಟಿನಂಟ್ ಡಾ.ಎಸ್.ಎಮ್. ಬುಲಬುಲಿ, ಫ್ಲೈಯಿಂಗ್ ಆಫೀಸರ್ ವ್ಹಿ.ಸಿ. ಕಾಮಗೋಳ ಮತ್ತು ಕೆಡೆಟ್ ಸಮರ್ಥ ಘಾಟಗೆ ಉಪಸ್ಥಿತರಿದ್ದಾರೆ.