80 ಅಡಿ ಎತ್ತರದಿಂದ ಕಾರ್ ಪಲ್ಟಿ : ಚಾಲಕ ಸಾವು

0

ದಾವಣಗೆರೆ : ಬರೋಬ್ಬರಿ 80 ಅಡಿ ಎತ್ತರದ ತುಂಗಾಭದ್ರಾ ಸೇತುವೆಯಿಂದ ಕಾರ್ ಕೆಳಗೆ ಬಿದ್ದು ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ .

ಹರ್ಷಿತ್ (27) ಸಾವನ್ನಪ್ಪಿದ ಕಾರ್ ಚಾಲಕ.

ಗೊಲ್ಲರಹಟ್ಟಿಯಿಂದ ಹೊನ್ನಾಳಿಗೆ ತೆರಳುವ ವೇಳೆ ಇಕೋಸ್ಟೋರ್ಸ್ಟ್ ಕಾರ್ ಸೇತುವೆಯಿಂದ ಕೆಳಗೆ ಬಿದ್ದಿದೆ. ಬಿದ್ದ ರಭಸಕ್ಕೆ ಕಾರ್ ನುಜ್ಜುಗುಜ್ಜಾಗಿದೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಅಪಘಾತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ.