ನಗರದ ವಿವಿಧ ಪ್ರದೇಶಗಳಲ್ಲಿ 04.00 ಕೋಟಿ 25.00 ಲಕ್ಷಗಳ ಅಭಿವೃಧ್ದಿ ಕಾಮಗಾರಿಗಳಿಗೆ : ಶಾಸಕ ಅನಿಲ ಬೆನಕೆ ಚಾಲನೆ

0

ಬೆಳಗಾವಿ : ಮಂಗಳವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಿಂದ ಮಹಾನಗರ ಪಾಲಿಕೆಯ ಅನುದಾದಡಿಯಲ್ಲಿ ನಗರದ ಹಲವು ಪ್ರದೇಶಗಳಲ್ಲಿ ನಾಲಾ ನಿರ್ಮಾಣ, ಯು.ಜಿ.ಡಿ ಪೈಪಲೈನ ಅಳವಡಿಕೆ ಹಾಗೂ ಇನ್ನಿತರೆ ಅಭಿವೃಧ್ದಿಪರ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಅಧೀಕೃತವಾಗಿ ಚಾಲನೆ ನೀಡಿದರು.

ಭೂಮಿ ಪೂಜೆ ಸಲ್ಲಿಸಿ ಮಾಹಿತಿ ನೀಡದ ಅವರು ಮಹಾನಗರ ಪಾಲಿಕೆಯ ಅನುದಾನದಡಿಯಲ್ಲಿನ ಒಟ್ಟು ರೂ. 4 ಕೋಟಿ 25 ಲಕ್ಷಗಳಲ್ಲಿ ನಗರದ ಕೋನವಾಳ ಗಲ್ಲಿ, ಪಾಟೀಲ ಗಲ್ಲಿ ಮತ್ತು ಕ್ಲಬ್ ರೋಡನಲ್ಲಿ ನಾಲಾ ನಿರ್ಮಾಣ, ಶೆಟ್ಟಿ ಗಲ್ಲಿ, ಖಡೆ ಬಜಾರ, ಖಂಜರ ಗಲ್ಲಿ ಹಾಗೂ ಖಡಕ ಗಲ್ಲಿಯಲ್ಲಿ ಯು.ಜಿ.ಡಿ ಪೈಪಲೈನ್ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆಯನ್ನು ನೇರವೇರಿಸಲಾಗಿದೆ.

ಬರುವ ದಿನಗಳಲ್ಲಿ ಮತಕ್ಷೇತ್ರದಲ್ಲಿ ಯಾವುದೇ ಕಾರ್ಯಗಳು ಉಳಿಯದಂತೆ ಗಮನಹರಿಸಿ ಅಭಿವೃಧ್ದಿಪರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ ಅವರು ಸಾರ್ವಜನಿಕರು ಕಾಮಗಾರಿಗಳನ್ನು ಗುತ್ತಿಗೆದಾರರಿಂದ ಉತ್ತಮ ರೀತಿಯಲ್ಲಿ ಕೆಲಸಗಳನ್ನು ಮಾಡಿಸಿಕೊಳ್ಳಬೆಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸದಾಸಿವ ನಗರ, ರೈಲ ನಗರ, ವೀರಭದ್ರ ನಗರದ ಸ್ಥಳಿಯರು, ಕಾರ್ಯಕರ್ತರು,

ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಸಚಿನ ಕಾಂಬಳೆ ಎಇಇ, ಮಂಜೂಶ್ರೀ ಎಇಇ, ಈಶ್ವರ ಎಇ, ಕಿರಿಯ ಅಭಿಯಂತರರಾದ ಯಲ್ಲಪ್ಪ, ರಹವಾಸಿಗಳಾದ ವಿಕ್ರಮ ಕಿಲ್ಲೇಕರ, ಆದರ್ಶ್ ನೂಲಿ, ಸರಿತಾ ಪಾಟೀಲ, ಅರ್ಜುನ ಗವಳಿ, ಸತೀಶ ದೇವರಮನಿ, ರಮೇಶ ಕಳಸನ್ನವರ, ಕಿತವಾಡಕರ, ರಾಹುಲ ಮೇತ್ರಿ, ಶ್ರೀನಿವಾಸ ಬೇನಗಿ, ಸ್ಥಳೀಯರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.