ಕೆರೆಗಳ ರಕ್ಷಣೆಗೆ ಕ್ರಮ: ಅನಂತ ಹೆಗಡೆ ಅಶೀಸರ

0

ಬೆಳಗಾವಿ ಫೆ.12 : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಮಕ್ಕಳಿಗೆ “ಬಾಲಗೌರವ ಪ್ರಶಸ್ತಿ” ಪ್ರಧಾನ ಮಾಡಲು ಉದ್ದೇಶಿಸಿರುವುದರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಮಕ್ಕಳು ಸಂಗೀತ, ನೃತ್ಯ, ನಟನೆ, ಕ್ರೀಡೆ, ಮತ್ತು ಚಿತ್ರಕಲೆ, ಕರಕುಶಲ, ಬರವಣಿಗೆ, ಸಂಶೋದನೆ (ಹೊಸ ಅವಿಷ್ಸಾರ) ಈ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕøತ ಮಗುವಾಗಿರಬೇಕು.
ಸದರಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಮಕ್ಕಳು “ಅಕಾಡೆಮಿ ಬಾಲ ಗೌರವ ಪ್ರಶಸ್ತಿ” ಗಾಗಿ ತಮ್ಮ ಸ್ವಯಂ ದೃಡಿಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವ ವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರಿಂದ ಪಡೆದು ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಎಚ್.ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-580004 ದಿನಾಂಕ: 20-02-2021 ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ‘ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ’ ಎಂದು ಲಕೋಟೆ ಮೇಲೆ ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2461666 ಇಲ್ಲಿಗೆ ಸಂಪರ್ಕಿಸಬಹುದು. ನಿಗದಿತ ಅವಧಿಯ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.