ಅಟಲ್ ಭೂಜಲ ಯೋಜನೆಯಿಂದ ಅಂತರ್ಜಲ ಮಟ್ಟ ಸುಧಾರಣೆ: ಮಾಧುಸ್ವಾಮಿ

0

ಬೆಳಗಾವಿ ಫೆ.12 : ಜಗತ್ತಿನ ಎಲ್ಲ ಪ್ರಮುಖ ಜೀವ ರಾಶಿಗಳಿಗೂ ಪ್ರಮುಖ ಅಂಶ ನೀರು ಹಾಗಾಗಿ ಭೂಮಿಯ ಸುತ್ತಲೂ ನೀರಿದ್ದರೂ ಕೇವಲ0.30 ರಸ್ತೆ ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ ಮಾನವ ಪಕ್ಷಿ ಪ್ರಾಣಿಗಳು ನೀರಿನ ಮೇಲೆ ಅವಲಂಬಿತವಾಗಿದ್ದು ಅದನ್ನು ಉಳಿಸುವ ಕೆಲಸ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕೆಲಸ ವನ್ನು ಅಟಲ್ ಭೂಜಲ ಯೋಜನೆಯಲ್ಲಿ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಜೆ ಪಿ ಮಾಧುಸ್ವಾಮಿ ಹೇಳಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಎಸ್ ಪಿ ಎಂ ಯು ಅಟಲ್ ಭೋಜ ಲ ಯೋಜನೆ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಬೆಳಗಾವಿ ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂ ಜಲ ಯೋಜನೆ (ಅಟಲ್ ಬಿಲ್) ಕಾಮಗಾರಿ ಅನುಷ್ಟಾನ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶ ಕೃಷಿಯಾಧಾರಿತ ದೇಶವಾಗಿದ್ದು ಬಹಳಷ್ಟು ಜನ ತೋಟಗಾರಿಕೆ ಹೈನುಗಾರಿಕೆ ಕೃಷಿಯನ್ನು ಜೀವನೋಪಾಯಕ್ಕೆ ನಂಬಿದ್ದು ನೀರು ಹಾಗೂ ಅಂತರ್ಜಲಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗಿದ್ದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು
41 ತಾಲೂಕುಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರ ಲು ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.
ನಂತರ ಯೋಜನೆಯ ಕುರಿತು ಮಾತನಾಡಿದ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ರಾಮದುರ್ಗ ತಾಲೂಕಿನ 26 ಗ್ರಾಮ ಪಂಚಾಯತಿ ಗಳನ್ನು ಆಟಲ ಭೂ ಜಲ ಯೋಜನೆಗೆ ಸೇರಿಸಿದ್ದು ವೀರಭದ್ರ ನೀರಾವರಿ ಏತ ನೀರಾವರಿ ಹಾಗೂ ಸಲಪೂರ ಏತ ನೀರಾವರಿ ಕಾಮಗಾರಿಗಳು ಆರಂಭವಾಗಿದ್ದು ಜಿಲ್ಲಾ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯು ಅಭಿವೃದ್ಧಿ ಪಡಿಸುವದರಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್, ಅಪರ್ ಜಿಲ್ಲಾಧಿಕಾರಿ ಅಶೋಕ್ ಗುಡಗುಂಟಿ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.///