ಪ್ರಕಟಣೆ

0

ಬಾಲ ಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ ಫೆ.12 : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಮಕ್ಕಳಿಗೆ “ಬಾಲಗೌರವ ಪ್ರಶಸ್ತಿ”ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಮಕ್ಕಳು ಸಂಗೀತ, ನೃತ್ಯ, ನಟನೆ, ಕ್ರೀಡೆ, ಮತ್ತು ಚಿತ್ರಕಲೆ, ಕರಕುಶಲ, ಬರವಣಿಗೆ, ಸಂಶೋಧನೆ (ಹೊಸ ಆವಿಷ್ಕಾರ) ಈ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕøತ ಮಗುವಾಗಿರಬೇಕು.
ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಮಕ್ಕಳು “ಅಕಾಡೆಮಿ ಬಾಲ ಗೌರವ ಪ್ರಶಸ್ತಿ”ಗಾಗಿ ತಮ್ಮ ಸ್ವಯಂ ದೃಢಿಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿಗಳು ಇವರಿಂದ ಪಡೆದು ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಧಾರವಾಡ ಲಕಮನಹಳ್ಳಿ ಕೆ.ಎಚ್.ಬಿ ಕಾಲೋನಿಯ ಚಂದ್ರಿಕಾ ಲೇಔಟ್ ಹಿಂಭಾಗದ ಕರ್ನಾಟಕ ಬಾಲವಿಕಾಸ ಅಕಾಡೆಮಿ – 58004 ವಿಳಾಸಕ್ಕೆ ಫೆ.20 ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಎಂದು ಲಕೋಟೆ ಮೇಲೆ ನಮೂದಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2461666ಗೆ ಸಂಪರ್ಕಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವಿದ್ಯುತ್ ವ್ಯತ್ಯಯ

ಬೆಳಗಾವಿ ಫೆ.12 : ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಫೆ.13 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 04 ಘಂಟೆಯವರೆಗೆ 110 ಕೆ.ವ್ಹಿ. ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ಲೈಲಾ ಶುಗರ ಕಾರ್ಖಾನೆ, ದೇವಲತ್ತಿ, ಬಿದರಭಾವಿ, ಭಂಡಾರಗಾಳಿ, ಗರ್ಲಗುಂಜಿ, ತೋಪಿನಕಟ್ಟಿ, ಬೋರಗಾಂವ, ನಿಡಗಲ, ದೊಡ್ಡಹೊಸೂರ, ಸಣ್ಣಹೊಸೂರ, ಕರಂಬಳ, ಜಳಗಾ, ಕುಪ್ಪಟಗಿರಿ, ಲೋಕೋಳ್ಳಿ, ಲಕ್ಕೇಬೈಲ, ಯಡೋಗಾ, ಬಳೋಗಾ, ಜೈನಕೊಪ್ಪ, ಗಾಂಧಿನಗರ, ಹಲಕರ್ಣಿ, ಕೋರ್ಟ ಪ್ರದೇಶ, ಕೈಗಾರಿಕಾ ಪ್ರದೇಶ, ಬಾಚೋಳ್ಳಿ, ಕೌಂದಲ, ಝಾಡನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿವೊಳ್ಳಿ ಹಾಗೂ ಚಾಪಗಾಂವ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ. ನಿಗಮದ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಮಾವಿನ ಬೆಳೆ ನಿರ್ವಹಣೆ

 

ಬೆಳಗಾವಿ ಫೆ.12 : ಮಾವಿನ ಬೆಳೆಯು ಹೂ ಮತ್ತು ಕಾಯಿ ಕಚ್ಚಿದ ಹಂತದಲ್ಲಿದ್ದು, ಈಗ ಇದರ ನಿರ್ವಹಣೆ ತುಂಬಾ ಮುಖ್ಯ. ಈ ಹಂತದಲ್ಲಿ ಹೂಸೊರಗು ರೋಗ, ಚಿಬ್ಬುರೋಗ ಮತ್ತು ಬೂದುರೋಗ ಹಾಗೂ ಕಾಡಿಗೆ ರೋಗದ ಬಾಧೆ ಹೆಚ್ಚಾಗಿರುತ್ತದೆ ಮತ್ತು ಸಣ್ಣ ಹಾಗೂ ಮಧ್ಯಮ ಗಾತ್ರದ ಕಾಯಿ ಉದುರುತ್ತಿರುತ್ತವೆ. ಇದರ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ ಥಯೋಫಿನೇಟ್ ಮಿಥೈಲ್ 70 WP 1 ಗ್ರಾಂ + ಮ್ಯಾಂಕೋಜೇಬ್ 75 WP 2 ಗ್ರಾಂ ಹಾಗೂ ಇದಕ್ಕೆ ಪೂರಕವಾಗಿ ಕಚ್ಚಿದ ಕಾಯಿಗಳು ಉದುರುವುದನ್ನು ತಡೆಯಲು ಪ್ಲಾನೋಪಿಕ್ಸ 0.5 ಮೀಲಿ ಬೆರೆಸಿ ಸಿಂಪರಿಸಬೇಕು.
ಗುಣಮಟ್ಟದ ಕಾಯಿ ಹಾಗೂ ಇಳುವರಿಗಾಗಿ ಮಾವಿನ ಬೆಳೆಯ ಕಾಯಿ ಕಚ್ಚಿದ ಹಂತದಲ್ಲಿದ್ದಾಗ ಪ್ರತಿ ಲೀಟರ್ ನೀರಿಗೆ 5 ಗ್ರಾಂ ಐಐಎಚ್‍ಆರ್(IIಊಖ) ಬೆಂಗಳೂರು ಇವರ ಮ್ಯಾಂಗೋಸ್ಪೇಶಲ್‍ನ್ನು ಬೆರೆಸಿ ಸಿಂಪರಿಸಬೇಕು.

ಈ ಸಿಂಪರಣೆಯನ್ನು ಮಾವಿನ ಕಾಯಿ ಗೋಲಿ ಆಕಾರದಿದ್ದಾಗ ಹಾಗೂ ಲಿಂಬೆ ಹಣ್ಣಿನ ಗಾತ್ರವಿದ್ದಾಗ ಸಿಂಪರಣೆ ಮಾಡಬೇಕು. ಇದರ ಸಿಂಪರಣೆ ಮಾಡುವಾಗ ಪ್ರತಿ 15 ಲೀಟರ್ ದ್ರಾವಣಕ್ಕೆ 1 ಲಿಂಬೆ ಹಣ್ಣಿನ ರಸ ಹಾಗೂ 1 ಶಾಂಪು ಬೆರೆಸಿ ಸಿಂಪರಿಸಬೇಕು ಎಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///